ಆರೋಪವನ್ನು ಅಳತೆ ಮಾಡುವವರೇ ಭ್ರಷ್ಟಾಚಾರಿಗಳು: ಸೊನಿಯಾ
ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡವವರೇ ಭ್ರಷ್ಟಾಚಾರಿಗಳು ಎಂದು ಕಾಂಗ್ರೆಸ್ ಅಧ್ಯಕ್ಷೆ...
ಅಮೇತಿ: ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡವವರೇ ಭ್ರಷ್ಟಾಚಾರಿಗಳು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೊನಿಯಾ ಗಾಂಧಿ ಶನಿವಾರ ಹೇಳಿದ್ದಾರೆ.
ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ ಗಾಂಧಿ, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಅದನ್ನು ಅಳತೆ ಮಾಡುವವರೇ ಹೆಚ್ಚು ಭ್ರಷ್ಟತೆಯಲ್ಲಿ ಮುಳುಗಿರುತ್ತಾರೆ ಎಂದು ಸೋನಿಯಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅಮೇತಿ ಜನರಿಗಾಗಿ ದುಡಿದಿದ್ದಾನೇ. ಇಂತಹ ನಾಯಕನ ವಿರುದ್ಧ ಸುಳ್ಳು ಆರೋಪ ಮಾಡವವರು ನಿಜವಾದ ಕಳ್ಳರು ಎಂದು ಹೇಳುವ ಮೂಲಕ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದಾರೆ.
ತಪ್ಪು ಮಾಡುವವರೇ ಬೇರೊಬ್ಬರ ಕಡೆ ಕೈತೋರಿಸುತ್ತಾರೆ ಹಾಗಾಗಿ ಅಂತಹವರನ್ನು ಜನತೆ ನಂಬಬಾರದು, ಕಾಂಗ್ರೆಸ್ ಬಡವರಿಗಾಗಿ ದುಡಿಯುತ್ತಿದೆ, ಜನರಿಗಾಗಿ ಸೇವೆ ಸಲ್ಲಿಸುತ್ತಿರುವ ರಾಹುಲ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರನ್ನು ಕಿತ್ತೊಗೆಯಿರಿ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.