ಖ್ಯಾತ ಟೀವಿ ಜರ್ನಲಿಸ್ಟ್ ಹಮೀದ್ ಮಿರ್ ಮೇಲೆ ಗುಂಡಿನ ದಾಳಿ
ಹಿರಿಯ ಪತ್ರಕರ್ತ ಹಮೀದ್ ಮಿರ್ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದೆ...
ಕರಾಚಿ: ಹಿರಿಯ ಪತ್ರಕರ್ತ ಹಮೀದ್ ಮಿರ್ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದೆ.
ಕರಾಚಿಯ ಏರ್ಪೋರ್ಟ್ನಿಂದ ಹಮೀದ್ ಮಿರ್ ಅವರು ವಾಹನದಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಗಾಯಗೊಂಡಿರುವ ಖ್ಯಾತ ಟೀವಿ ಜರ್ನಲಿಸ್ಟ್ ಹಮೀದ್ ಮಿರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಮೀದ್ ಮಿರ್ ಅವರು ಜಿಯೋ ನ್ಯೂಸ್ ವಾಹಿನಿಯಲ್ಲಿ ನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.