ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕಲಿಯಾಗುತ್ತಿದೆ ಅನಂತ ಪದ್ಮನಾಭನ ಸಂಪತ್ತು!

ಕಳೆದ ಮೂರು ವರ್ಷಗಳ ಹಿಂದೆ ಕೇರಳದ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿಯ ದೇವಾಲಯದಲ್ಲಿ ಪತ್ತೆಯಾದ ಸುಮಾರು ಒಂದು ಲಕ್ಷ ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣ ..

Lingaraj Badiger
Updated On : 19 Apr 2014, 12:22 pm

ನವದೆಹಲಿ: ಕಳೆದ ಮೂರು ವರ್ಷಗಳ ಹಿಂದೆ ಕೇರಳದ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿಯ ದೇವಾಲಯದಲ್ಲಿ ಪತ್ತೆಯಾದ ಸುಮಾರು ಒಂದು ಲಕ್ಷ ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣ ಈಗ ನಕಲಿಯಾಗುತ್ತಿದೆ ಎಂಬ ಆತಂಕಕಾರಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ.

ಜುಲೈ 2011ರಲ್ಲಿ ಆನಂತ ಪದ್ಮನಾಭಸ್ವಾಮಿಯ ದೇವಾಲಯದ ನೆಲಮಾಳಿಗೆಯಲ್ಲಿ ಪತ್ತೆಯಾಗಿದ್ದ ಚಿನ್ನಾಭರಣ, ಮುತ್ತು, ಹರಳು, ಚಿನ್ನದ ನಾಣ್ಯಗಳು ಮತ್ತು ಬಂಗಾರದ ಅಸಲಿ ಹಾರಗಳು ಈಗ ನಾಪತ್ತೆಯಾಗುತ್ತಿದ್ದು, ಆ ಸ್ಥಳದಲ್ಲಿ ನಕಲಿ ಚಿನ್ನಾಭಾರಣಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ.

ಈ ಕುರಿತು ಶನಿವಾರ ಸುಪ್ರೀಂ ಕೋರ್ಟ್ ವರದಿ ಸಲ್ಲಿಸಿರುವ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಅವರು, ದೇವಸ್ಥಾನದಲ್ಲಿನ ಚಿನ್ನಾಭರಣವನ್ನು ಕದಿಯಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇವಸ್ಥಾನದ ಆವರಣದಲ್ಲಿ ಗೋಲ್ಡ್ ಪ್ಲೇಟಿಂಗ್ ಯಂತ್ರ ಸ್ಥಾಪಿಸಲಾಗಿದೆ. ದೇವಸ್ಥಾನದಲ್ಲಿನ ಮೂಲ ಆಭರಣಗಳನ್ನು ಕದ್ದು, ನಕಲಿ ಆಭರಣ ಸಿದ್ಧಪಡಿಸಿ, ಅದನ್ನು ಯತಾಸ್ಥಿತಿಯಲ್ಲಿಡುತ್ತಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ತಾವು ತಕ್ಷಣ ದೇವಸ್ಥಾನದಲ್ಲಿ ಚಿನ್ನಾಭಾರಣವನ್ನು ಮತ್ತೊಮ್ಮೆ ಆಡಿಟ್ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ದೇವಸ್ಥಾನದಲ್ಲಿ ಪತ್ತೆಯಾದ ಸಂಪತ್ತು ಸಾರ್ವಜನಿಕ ಸಂಪತ್ತಾಗಿದೆ. ಆದರೆ ರಾಜಕುಟುಂಬ ಈ ಸಂಪತ್ತನ್ನು ಸ್ವಂತ ಸ್ವತ್ತು ಎಂದು ಭಾವಿಸಿ, ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಇದನ್ನು ಕೋರ್ಟ್ ತಡೆಯಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಲಕ್ಷ ಲಕ್ಷ ಕೋಟಿ ಸಂಪತ್ತು ಪತ್ತೆಯಾಗುತ್ತಿದ್ದಂತೆ ವಿಷಯ ಸುಪ್ರೀಂ ಕೋರ್ಟ್‌ಗೆ ತಲುಪಿ, ಸ್ವತಃ ನ್ಯಾಯಾಲಯವೇ ಗೋಪಾಲ ಸುಬ್ರಮಣ್ಯಂ ಎಂಬುವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿ, ದೇವಸ್ಥಾನದಲ್ಲಿನ ಸ್ಥಿತಿಗತಿಗಳನ್ನು ವರದಿ ಮಾಡುವಂತೆ ಸೂಚಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement