ಮಮತಾ ವಿರುದ್ಧ ರಾಹುಲ್ ವಾಗ್ಧಾಳಿ
ಉತ್ತಮ ಆಡಳಿತ ನೀಡುವಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು...
ಪಶ್ಚಿಮ ಬಂಗಾಳ: ಉತ್ತಮ ಆಡಳಿತ ನೀಡುವಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡವರನ್ನು ಕಡೆಗಣಿಸಿದ್ದಾರೆ ಎಂದು ರಾಹುಲ್ ರ್ಯಾಲಿಯಲ್ಲಿ ಆರೋಪಿಸಿದ್ದಾರೆ.
ರಾಜ್ಯಕ್ಕಾಗಿ ಕೇಂದ್ರದಿಂದ ಸಾಕಷ್ಟು ಅನುದಾನ ಒದಗಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ರಾಹುಲ್ ದೂರಿದ್ದಾರೆ.
ಮಮತಾ ಸರ್ಕಾರ ಬಡವರಿಗೆ ಸೌಲಭ್ಯ ಒದಗಿಸಿಲ್ಲ ಎಂದ ಅವರು ಬಡವರ ಬಗ್ಗೆ ಚಿಂತಿಸುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರ ಎಂದು ಹೇಳಿದ್ದಾರೆ.