ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯುಪಿಎನಲ್ಲಿ ತಾಯಿ, ಮಗನ ಆಡಳಿತ: ಮೋದಿ

ಯುಪಿಎ ಸರ್ಕಾರದ ಆಡಳಿತವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ...

Mainashree
Updated On : 19 Apr 2014, 3:56 am

ಅಸ್ಸಾಂ: ಯುಪಿಎ ಸರ್ಕಾರದ ಆಡಳಿತವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಯುಪಿಎ ಸರ್ಕಾರದ ಆಡಳಿತವನ್ನು ಕೇವಲ ಸೋನಿಯಾ ಮತ್ತು ರಾಹುಲ್ ಗಾಂಧಿ ನಡೆಸುತ್ತಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಹೆಸರಿಗೆ ಮಾತ್ರ ಎಂದು ಮೋದಿ ತಿಳಿಸಿದ್ದಾರೆ.

ಇಂದು ಅಸ್ಸಾಂ ನಡೆಯುತ್ತಿರುವ ಬಿಜೆಪಿ ರ್ಯಾಲಿಯಲ್ಲಿ ಸಂಜಯ ಬಾರು ಅವರು ಬರೆದಿರುವ ' ದಿ ಆಕ್ಸಿಂಡೆಂಟಲ್ ಪ್ರೈಂ ಮಿನಿಸ್ಟರ್‌' ಪುಸ್ತಕ ಕುರಿತು ಮಾತನಾಡಿದ ಮೋದಿ, ಸೋನಿಯಾ ಗಾಂಧಿ ಮತ್ತು ರಾಹುಲ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಪುಸ್ತಕದಲ್ಲಿ ಯುಪಿಎ ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ನಿರ್ಧರಿಸುತ್ತಾರೆ ಎಂಬಂತೆ ಬರೆಯಲಾಗಿದೆ ಎಂದ ಮೋದಿ, ಪುಸ್ತಕದಲ್ಲಿ ಬರೆದಿರುವುದೇ ಸತ್ಯ ಎಂದು ಹೇಳಿದ್ದಾರೆ.

ಮನಮೋಹನ್ ಸಿಂಗ್ ಅವರು ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತೆ. ಸಿಂಗ್ ಅವರನ್ನು ಮುಂದೆ ತಳ್ಳಿ ಅವರ ಬೆನ್ನ ಹಿಂದೆ ತಾಯಿ ಮತ್ತು ಮಗ ಕೆಲಸ ಮಾಡುತ್ತಾರೆ. ಯುಪಿಎ ಸರ್ಕಾರದಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರಗಳಿಗೆ ತಾಯಿ ಮಗ ಮುಖ್ಯ ಸೂತ್ರಧಾರಿಗಳು ಎಂದು ಮೋದಿ ಆಪಾದಿಸಿದ್ದಾರೆ.

ದೇಶದೆಲ್ಲೇಡೆ ಸುಳ್ಳುನ್ನು ಹಬ್ಬಿಸುವ ಹವ್ಯಾಸವನ್ನು ಸೋನಿಯಾ ಮತ್ತು ರಾಹುಲ್ ರೂಢಿಸಿಕೊಂಡಿದ್ದಾರೆ ಎಂದ ಅವರು, ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ. ಕಾಂಗ್ರೆಸ್‌ಗೆ ಮತ ಬೇಕಾದರೆ ಮಾತ್ರ ತಾಯಿ ಮಗ ಮತಯಾಚಿಸಲು ಮುಂದೆ ಬರುತ್ತಾರೆ, ಅದೇ ಅಧಿಕಾರ ಸಿಕ್ಕಮೇಲೆ ಜನರ ಸಮಸ್ಯೆ ಬಗೆಹರಿಸುವುದರಿಂದ ಹಿಂದೆ ಸರಿಯುತ್ತಾರೆ ಎಂದು ಮೋದಿ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement