ಎನ್ಕೌಂಟರ್ ಪ್ರಕರಣ: ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಮಂಗಳೂರು: ಜಾನುವಾರು ಸಾಗಟದ ಎನ್ಕೌಂಟರ್ ಪ್ರಕರಣದಲ್ಲಿ ಸಾವನ್ನಪ್ಪಿದ ಮಂಗಳೂರಿನ ಜೋಕಟ್ಟೆ ನಿವಾಸಿ ಕಬೀರ್ ಕುಟುಂಬಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ನಿನ್ನೆ ನಡೆದ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಯು.ಟಿ. ಖಾದರ್ , ಗೃಹ ಸಚಿವ ಕೆ.ಜೆ.ಜಾರ್ಜ್ ಜತೆ ಮಾತನಾಡಿದ್ದು, ಪ್ರಕರಣದ ಬಗ್ಗೆ ಸಿಐಡಿ ತನಿಖೆ ಮಾಡಲಾಗುವುದೆಂದು ಎಂದರು.
ಕಬೀರ್ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದ್ದು, ಮೃತನ ಮನೆಗೆ ಶಾಸಕ ಮೊಯ್ದಿನ್ ಬಾವಾ ಆಗಮಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ಬಗ್ಗೆ ಉನ್ನತ ತನಿಖೆಗೆ ಆಗ್ರಹಿಸುವುದಾಗಿ ಭರವಸೆ ನೀಡಿದ್ದಾರೆ.
29 ವಯಸ್ಸಿನ ಕಬೀರ್ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾಗ ಶೃಂಗೇರಿ ಚೆಕ್ ಪೋಸ್ಟ್’ನಲ್ಲಿ ನಕ್ಸಲ್ ಎಂಬ ಶಂಕೆಯಿಂದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದನು. ಈತನ ಜೊತೆಗಿದ್ದ ನಾಲ್ವರಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದು, ಮತ್ತೊಬ್ಬ ಫಾರೂಕ್ ಎಂಬಾತ ನಿನ್ನೆಯೇ ಸೆರೆಸಿಕಿದ್ದ. ಇಂದು ಮತ್ತೊರ್ವ ಆರೋಪಿ ಸರ್ಪರಾಜ್ ಎಂಬುವವನನ್ನು ಪೊಲೀಸರು ಬಂದಿಸಿದ್ದಾರೆ.