'ಮಹಾ' ಉಪ ಸಿಎಂ ಅಜಿತ್ ಪವಾರ್ ವಿರುದ್ಧ ಎಫ್ಐಆರ್
ಮತದಾರರರಿಗೆ ಬೆದರಿಕೆಯೊಡ್ಡಿದ್ದ ರಾಷ್ಟ್ರೀಯಾ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಭಾನುವಾರ...
ನವದೆಹಲಿ: ಮತದಾರರರಿಗೆ ಬೆದರಿಕೆಯೊಡ್ಡಿದ್ದ ರಾಷ್ಟ್ರೀಯಾ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಭಾನುವಾರ ಎಫ್ಐಆರ್ ದಾಖಲಾಗಿದೆ.
ಬಾರಾಮತಿ ಕ್ಷೇತ್ರದ ಎನ್ಸಿಪಿ ಅಭ್ಯರ್ಥಿ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಲೆಗೆ ಮತ ನೀಡದಿದ್ದರೆ ನಿಮ್ಮ ಗ್ರಾಮಕ್ಕೆ ನೀರು ಸರಬರಾಜು ನಿಲ್ಲುಸುವುದಾಗಿ ಬೆದರಿಕೆ ಹಾಕಿದ್ದ ಅಜಿತ್ ಪವಾರ್ ವಿರುದ್ಧ ಚುನಾವಣಾ ಆಯೋಗ ಎಫ್ಐಆರ್ ದಾಖಲಿಸಿದೆ.
ಬಾರಾಮತಿ ಕ್ಷೇತ್ರ ವಾಪ್ತಿಗೊಳಪಡುವ ಮಸಲವಾಡಿ ಗ್ರಾಮದಲ್ಲಿ ಏಪ್ರಿಲ್ 16ರ ಚುನಾವಣಾ ಪ್ರಚಾರದ ವೇಳೆ ಈ ಗ್ರಾಮದಲ್ಲಿ ಯಾರಾದರೂ ವ್ಯಕ್ತಿ ತಪ್ಪು ಎಸಗಿದರೆ(ಸುಪ್ರಿಯಾ ಸುಲೆಗೆ ಮತ ಹಾಕದಿದ್ದರೆ) ಗ್ರಾಮಕ್ಕೆ ನೀರು ಪೂರೈಕೆಯನ್ನೇ ನಿಲ್ಲುಸುತ್ತೇನೆ ಎಂದು ಪವಾರ್ ಹೇಳಿದ್ದರು. ಈ ವಿಡಿಯೋ ಆಧಾರ ಮೇಲೆ ಬಾರಾಮತಿ ಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ಸುರೇಶ್ ಖೋರ್ಪಡೆ ಕಳೆದ ಎರಡು ದಿನಗಳ ಹಿಂದೆ ವಡಗಾಂವ್ ಪೊಲೀಸರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸುರೇಶ್ ಖೋರ್ಪಡೆ ಚುನಾವಣಾ ಆಯೋಗಕ್ಕೆ ನೀಡಿರುವ ವಿಡಿಯೋ ಕಾಫಿಯಲ್ಲಿ ಅಜಿತ್ ಅವರ ಚಿತ್ರ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೆ ಧ್ವನಿಯನ್ನು ಪರಿಶೀಲಿಸಿದಾಗಿ ಅದು ಪವಾರ್ ಅವರದ್ದೇ ಎಂಬುದು ಸ್ಪಷ್ಟವಾಗಿರುವುದರಿಂದ ಆಯೋಗ ಅಜಿತ್ ಪವಾರ್ ವಿರುದ್ಧ ಸೆಕ್ಷನ್ 171ಸಿ ಹಾಗೂ 171ಎಫ್(ಚುನಾವಣೆಯಲ್ಲಿ ಅನುಚಿತ ಪ್ರಭಾವ)ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.