ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಸ್ತಿ ವಿವಾದ; ತೊಗಾಡಿಯಾ ವಿರುದ್ಧ ವ್ಯಥಾರೋಪ: ಆರೆಸ್ಸೆಸ್ಸ್

ಹಿಂದೂಗಳ ಆಸ್ತಿಯನ್ನು ಮುಸ್ಲಿಂ ಸಮುದಾಯದವರು...

Rashmi Kasaragodu
Updated On : 21 Apr 2014, 8:24 am

ನವದೆಹಲಿ: ಹಿಂದೂಗಳ ಆಸ್ತಿಯನ್ನು ಮುಸ್ಲಿಂ ಸಮುದಾಯದವರು ಖರೀದಿಸುವಂತಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ವಿಹಿಂಪ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ರಕ್ಷಣೆಗೆ ಆರೆಸ್ಸೆಸ್ಸ್ ಧಾವಿಸಿದೆ.

ತೊಗಾಡಿಯಾ ಅವರು ಈ ರೀತಿ ಹೇಳಲೇ ಇಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೆಸ್ಸೆಸ್‌ನ ರಾಂ ಮಾಧವ್ ಹೇಳಿದ್ದಾರೆ.

ಗುಜರಾತ್‌ನ ಭಾವ್‌ನಗರ ಟೌನ್ ನಲ್ಲಿ ಶನಿವಾರ ವಿಹಿಂಪ ಮತ್ತು ಬಜರಂಗದಳದ ಸದಸ್ಯರ ಉಪಸ್ಥಿತಿಯಲ್ಲಿ ಹಿಂದೂ ಕುಟುಂಬದವರ ಆಸ್ತಿಯನ್ನು ಮುಸ್ಲಿಂ ಉದ್ಯಮಿಯೊಬ್ಬರು ಖರೀದಿಸುವುದಕ್ಕೆ ತೊಗಾಡಿಯಾ ತಡೆಯೊಡ್ಡಿದ್ದರು ಎಂದು ಹೇಳಲಾಗುತ್ತಿದೆ.

48 ಗಂಟೆಗಳ ಕಾಲಾವಧಿಯಲ್ಲಿ ಮನೆ ಖಾಲಿ ಮಾಡದೇ ಇದ್ದರೆ ತಾನು ಮನೆಯ ಮುಂದೆ ಭಜರಂಗದಳದ ಬೋರ್ಡ್ ಹಾಕಿ ಮನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂಬುದಾಗಿ ತೊಗಾಡಿಯಾ ಬೆದರಿಕೆಯೊಡ್ಡಿದ್ದರು.

ತೊಗಾಡಿಯಾ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಎಲ್ಲೆಡೆಯಿಂದ ಕೇಳಿ ಬಂದಿದ್ದವು.

ಕಾಂಗ್ರೆಸ್‌ನ ಕೆ.ರೆಹಮಾನ್ ಖಾನ್, ಮೋದಿಯವರು ಕಾನೂನಿಗೆ ಬೆಲೆ ಕೊಡುತ್ತಿದ್ದರೆ, ಇಂಥಾ ವಿವಾದಾತ್ಮಕ ಹೇಳಿಕೆ ನೀಡಿದ ತೊಗಾಡಿಯಾ ಅವರನ್ನು ಬಂಧಿಸಲಿ ಎಂದು ಹೇಳಿದ್ದರು.

ಏತನ್ಮಧ್ಯೆ, ತೊಗಾಡಿಯಾ ಅವರು ವಿವಾದಾತ್ಮಕವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎನ್ನುವ ಮೂಲಕ ಆರೆಸ್ಸೆಸ್ಸ್ ತೊಗಾಡಿಯಾ ಬೆಂಬಲಕ್ಕೆ ನಿಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement