ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎನ್‌ಕೌಂಟರ್ ಕೇಸಿನಲ್ಲಿ ಮೋದಿಯವರನ್ನು ವಿಚಾರಣೆಗೊಳಪಡಿಸಿ: ಕಾಂಗ್ರೆಸ್

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ತರಾಟೆಗೆ..

Rashmi Kasaragodu
Updated On : 21 Apr 2014, 4:08 am

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ತುಳಸೀರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ  ಮೋದಿ ಅವರನ್ನು ವಿಚಾರಣೆಗೊಳಪಡಿಸಬೇಕೆಂದು ಒತ್ತಾಯಿಸಿದೆ.

ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ , ತುಳಸೀರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿ ವಿರುದ್ಧ ಪ್ರಬಲ ಸಾಕ್ಷ್ಯಗಳು ಸಿಬಿಐ ಕೈಯಲ್ಲಿದ್ದರೂ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.  ಅದೇ ವೇಳೆ ಮೋದಿಯವರ ಆಪ್ತ ಅಮಿತ್ ಷಾ ಈ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ಸಿಬಲ್ ಹೇಳಿದ್ದಾರೆ.

ವಜಾಗೊಳಿಸಲ್ಪಟ್ಟ ಐಪಿಎಸ್ ಅಧಿಕಾರಿ ಡಿಜಿ ವಂಜಾರಾ ಮತ್ತು ರಾಜ್ ಕುಮಾರ್ ಪಾಂಡ್ಯನ್ ಜತೆ ಮುಖ್ಯಮಂತ್ರಿಯವರ ಕಚೇರಿಯಲ್ಲಿ ವಿಶೇಷ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ (ಒಎಸ್‌ಡಿ) ಪರಾಗ್ ಷಾ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಪರಾಗ್ ಷಾ ಅವರು ಮೋದಿ ಕಚೇರಿಯಲ್ಲಿ 2003-2008 ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಆದಾಗ್ಯೂ, ಈ ಬಗ್ಗೆ ಸಿಬಿಐಯನ್ನು ಗೃಹ ಸಚಿವಾಲಯ ಯಾಕೆ ಪ್ರಶ್ನಿಸಿಲ್ಲ ಎಂದು ಸಿಬಲ್ ಅವರನ್ನು ಕೇಳಿದಾಗ, ಸಿಬಿಐ ನಮ್ಮ ಜೇಬಲ್ಲಿ ಇಲ್ಲ. ಅದೊಂದು ಸ್ವತಂತ್ರ ಏಜೆನ್ಸಿ, ಕಳೆದ 8 ವರ್ಷಗಳಲ್ಲಿ ಸಿಬಿಐ ಪರಾಗ್ ಷಾ ಅವರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಈ ಎನ್‌ಕೌಂಟರ್ ಬಗ್ಗೆ ಮುಖ್ಯಮಂತ್ರಿಯವರ ಕಚೇರಿಗೆ ಮಾಹಿತಿ ಇತ್ತು. ಆದ್ದರಿಂದ ಪರಾಗ್ ಷಾ ಅವರನ್ನು ಬಂಧಿಸಬೇಕು ಹಾಗು ಮೋದಿಯವರನ್ನು ವಿಚಾರಣೆಗೊಳಪಡಿಸಬೇಕೆಂದು ಸಿಬಲ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement