ಎನ್ಡಿಎ ಅಧಿಕಾರಕ್ಕೆ ಬಂದ್ರೆ ವಾದ್ರಾ ಜೈಲಿಗೆ: ಉಮಾ ಭಾರತಿ
ಎನ್ಡಿಎ ಅಧಿಕಾರಕ್ಕೆ ಬಂದರೆ...
ಜಾನ್ಸಿ: ಎನ್ಡಿಎ ಅಧಿಕಾರಕ್ಕೆ ಬಂದರೆ ಸೋನಿಯಾ ಗಾಂಧಿ ಅಳಿಯ ಜೈಲಿಗೆ ಹೋಗುತ್ತಾರೆ ಎಂದು ಉಮಾ ಭಾರತಿ ಸೋಮವಾರ ಹೇಳಿದ್ದಾರೆ.
ಕಾನೂನಿನ ನಿಯಮಗಳನ್ನು ಮೀರಿ ವಾದ್ರಾ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿರುವ ಉಮಾ ಭಾರತಿ, ಸೋನಿಯಾ ಗಾಂಧಿ ಅಳಿಯ ಎಂಬ ಮಾತ್ರಕ್ಕೆ ವಾದ್ರಾ ಮಾಡುವ ಅವ್ಯವಹಾರಗಳನ್ನು ಕಾಂಗ್ರೆಸ್ ಸಹಿಸಿಕೊಂಡಿದೆ ಎಂದು ಉಮಾ ಭಾರತಿ ದೂರಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಾದ್ರಾ ಬಂಧಿಸಲು ಹಿಂದೇಟಾಕುತ್ತಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ಎಂಬುದು ಇದಕ್ಕೆ ಮೂಲ ಕಾರಣ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ, ವಾದ್ರಾವನ್ನು ನಾನೇ ಜೈಲಿಗೆ ಕಳುಹಿಸುತ್ತೇನೆ. ಕೇಂದ್ರ ಸರ್ಕಾರ ಮಂತ್ರಿಗಳು ಒತ್ತಡಕ್ಕೆ ಸಿಲುಕಿದ್ದು, ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ವಾದ್ರಾನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಉಮಾ ತಿಳಿಸಿದ್ದಾರೆ.