ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾನು ಟೀ ಮಾರಿದ್ದೇನೆ ಆದರೆ ಕಾಂಗ್ರೆಸ್‌ನಂತೆ ದೇಶವನ್ನೇ ಮಾರಿಲ್ಲ: ಮೋದಿ

ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮುಂದು...

Rashmi Kasaragodu
Updated On : 21 Apr 2014, 8:24 am

ಹರ್ದೋಯಿ: ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನಾನು ಟೀ ಮಾರಿದ್ದೇನೆ ನಿಜ, ಆದರೆ ಕೇಂದ್ರದಲ್ಲಿರುವ ಯುಪಿಎ ಸರ್ಕಾರದಂತೆ ಎಂದಿಗೂ ದೇಶವನ್ನು ಮಾರಿಲ್ಲ ಎಂದು ಹೇಳಿದ್ದಾರೆ.

ಹರ್ದೋಯಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಾನು ಟೀ ಮಾರಿದ್ದೇನೆ ಆದರೆ ಯುಪಿಎ ಒಕ್ಕೂಟಗಳಂತೆ ದೇಶವನ್ನು ಮಾರಿಲ್ಲ ಎಂದು ಹೇಳಲು ಹೆಮ್ಮೆಯಿದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ನಮ್ಮ ದೇಶವನ್ನು ಎಂಥಾ ಕೂಪಕ್ಕೆ ತಳ್ಳಿದೆಯೆಂದರೆ ಅದರಿಂದ ದೇಶವನ್ನು ಹೊರತರಲು ನನಗೆ ತುಂಬಾ ಜನರ ಬೆಂಬಲ ಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.

ಅದೇ ವೇಳೆ ಕಾಂಗ್ರೆಸ್  ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಭಿಕರನ್ನುದ್ದೇಶಿಸಿ ನಿಮಗೆ ದೆಹಲಿಯಲ್ಲಿರುವ ಅಮ್ಮ ಮತ್ತು ಮಗ ನೀಡುವ ಆಮ್ಲಜನಕದಿಂದ ನಡೆಸಲ್ಪಡುವ ಸರ್ಕಾರ ಬೇಕೇ? ಎಂದು ಕೇಳಿದ್ದಾರೆ.

ಮಾತ್ರವಲ್ಲದೆ, ಅಮೇಠಿಯಲ್ಲಿಯೇ ಅಧಿಕಾರ ಚಲಾಯಿಸಲು ಸಾಧ್ಯವಾಗದೇ ಇರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರದಲ್ಲಿ ಆಡಳಿತ ನಡೆಸಲು ಸಾಧ್ಯವೆ? ನಿಮಗೆಲ್ಲರಿಗೂ ಕೇಂದ್ರದಲ್ಲಿ ಸಶಕ್ತ ಸರ್ಕಾರ ಬೇಕೆಂದು ಅನಿಸುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ದಲಿತ ಮತ್ತು ಬಡ ಕುಟುಂಬಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿರುವುದಕ್ಕೆ ಹೆಚ್ಚಿನ ಪ್ರಚಾರ ನೀಡುತ್ತಿರುವುದನ್ನು ವ್ಯಂಗ್ಯ ಮಾಡಿದ ಮೋದಿ, ರಾಹುಲ್ ಅವರ ಈ ಭೇಟಿ ತಾಜ್ ಮಹಲ್ ನ್ನು ನೋಡಲು ಪ್ರವಾಸಿಗರು ಬರುವ ರೀತಿಯಂತಿದೆ ಎಂದು ಲೇವಡಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement