ಪ್ರತ್ಯೇಕತಾವಾದಿ ಗಿಲಾನಿಗೆ ನಗ್ಮಾಳಿಂದ ಭಾರತ ರತ್ನ!
ಖ್ಯಾತ ಶಹನಾಯಿ ವಾದಕ ದಿ.ಬಿಸ್ಮಿಲ್ಲಾ ಖಾನ್ ಅವರ ಹೆಸರನ್ನು ಕನ್‌ಫ್ಯೂಸ್ ಮಾಡಿಕೊಂಡ...
ರಾಂಪುರ್,ಉತ್ತರ ಪ್ರದೇಶ: ಖ್ಯಾತ ಶಹನಾಯಿ ವಾದಕ ದಿ.ಬಿಸ್ಮಿಲ್ಲಾ ಖಾನ್ ಅವರ ಹೆಸರನ್ನು ಕನ್‌ಫ್ಯೂಸ್ ಮಾಡಿಕೊಂಡ ಚಿತ್ರನಟಿ, ರಾಜಕಾರಣಿ ನಗ್ಮಾ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಅವರಿಗೆ ಭಾರತರತ ರತ್ನ ಸಿಗಬೇಕಿತ್ತು ಎಂದು ಹೇಳಿದ ಘಟನೆ ಸೋಮವಾರ ಮೀರತ್‌ನಲ್ಲಿ ನಡೆದಿದೆ. ಮೀರತ್ ನಲ್ಲಿ ಖಾಜಿಂ ಅಲಿ ಖಾನ್ ಪರವಾಗಿ ಪ್ರಚಾರ ಮಾಡುತ್ತಿರುವ ನಗ್ಮಾ ಈ ರೀತಿ ಹೇಳಿ ಮುಜುಗರಕ್ಕೊಳಗಾಗಿದ್ದಾರೆ.
ಗಿಲಾನಿ ಅವರು ದೇಶದ ಪ್ರತಿಭಾನ್ವಿತ ವ್ಯಕ್ತಿ. ಅವರಿಗೆ ಭಾರತ ರತ್ನ ಸಿಗಬೇಕಿತ್ತು, ಗಿರಿರಾಜ್ ಅವರ ಪ್ರಕಾರ ಇವರೂ ಪಾಕಿಸ್ತಾನಕ್ಕೆ ಹೋಗಬೇಕಿತ್ತು ಎಂದು ಹೇಳುವ ಮೂಲಕ ನಗ್ಮಾ ತಮ್ಮ ಪೆದ್ದುತನ ಪ್ರದರ್ಶಿಸಿದ್ದಾರೆ.
ಮೋದಿ ಅವರನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಜೆಪಿ ನಾಯಕ ಗಿರಿರಾಜ್ ಅವರ ವಿವಾದಾತ್ಮಕ ಹೇಳಿಕೆಯನ್ನು ಹಾಗು ಬಿಸ್ಮಿಲ್ಲಾಖಾನ್‌ರ ಕುಟುಂಬ ನರೇಂದ್ರ ಮೋದಿ ಪರ ಪ್ರಚಾರ ಮಾಡಲ್ಲ ಎಂಬ ಸುದ್ದಿಯನ್ನು ಅರ್ಧಂಬರ್ಧ ಗ್ರಹಿಸಿಕೊಂಡ ನಗ್ಮಾ ಪ್ರಚಾರ ಕಾರ್ಯಕ್ರಮದಲ್ಲಿ ಗಿಲಾನಿ ಅವರಿಗೆ ಭಾರತರತ್ನ ಸಿಗಬೇಕಿತ್ತು ಎಂಬ ಹೇಳಿಕೆ ನೀಡುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.