ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಗೆ ಅನುಮೋದಕರಾಗಲು ಬಿಸ್ಮಿಲ್ಲಾ ಖಾನ್ ಕುಟುಂಬ ನಕಾರ

'ದೇಗುಲಗಳ ನಗರಿ' ವಾರಾಣಸಿ ಈಗ ರಾಜಕೀಯ ರಾಜಧಾನಿಯಾಗಿ ಮಾರ್ಪಟ್ಟಿದೆ. ಆದರೆ ವಾರಾಣಸಿಯಲ್ಲಿ ನೆಲೆಸಿರುವ ಶಹನಾಯಿ ಮಾಂತ್ರಿಕ ದಿ.ಬಿಸ್ಮಿಲ್ಲಾ ಖಾನ್ ಅವರ ..

Lingaraj Badiger
Updated On : 21 Apr 2014, 11:59 am

ವಾರಾಣಸಿ: 'ದೇಗುಲಗಳ ನಗರಿ' ವಾರಾಣಸಿ ಈಗ ರಾಜಕೀಯ ರಾಜಧಾನಿಯಾಗಿ ಮಾರ್ಪಟ್ಟಿದೆ. ಆದರೆ ವಾರಾಣಸಿಯಲ್ಲಿ ನೆಲೆಸಿರುವ  ಶಹನಾಯಿ ಮಾಂತ್ರಿಕ ದಿ.ಬಿಸ್ಮಿಲ್ಲಾ ಖಾನ್ ಅವರ ಕುಟುಂಬ ಮಾತ್ರ ಈ ರಾಜಕೀಯದ ಸಹವಾಸವೇ ಬೇಡ ಎಂದಿದೆ.

ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏಪ್ರಿಲ್ 24ರಂದು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ತಾವು ಹಾಜರಿದ್ದು, ಮೋದಿ ಅವರಿಗೆ ಅನುಮೋದಕರಾಗಬೇಕು ಎಂದು ಬಿಜೆಪಿ ನಾಯಕರು ಖಾನ್ ಕುಟುಂಬದ ಸದಸ್ಯರಲ್ಲಿ ಮನವಿ ಮಾಡಿದ್ದರು. ಆದರೆ ಬಿಜೆಪಿ ನಾಯಕರ ಮನವಿಯನ್ನು ತಿರಸ್ಕರಿಸಿರುವ ಖಾನ್ ಅವರ ಪುತ್ರ ಜಮೀನ್ ಹುಸೇನ್ ಬಿಸ್ಮಿಲ್ಲಾ ಅವರು, ನಾವು ಯಾವತ್ತು ರಾಜಕೀಯ ಮಾಡಿಲ್ಲ. ಮಾಡುವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಕಲಾವಿದರ ಕುಟುಂಬವನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವಾರಾಣಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್‌ನ ಅಜಯ್ ರಾಯ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಪ್ರಮುಖರಾಗಿ ಸೆಣಸಲಿದ್ದಾರೆ. ಇದರ ಜತೆಗೆ ತೃಣಮೂಲ ಕಾಂಗ್ರೆಸ್, ಬಿಎಸ್‌ಪಿ, ಸಮಾಜವಾದಿ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಮೇ 12ರಂದು ಇಲ್ಲಿ ಚುನಾವಣೆ ನಡೆಯಲಿದೆ.

ಈ ಹಿಂದೆ ಗುಜರಾತ್ನ ವಡೋದರಾದಿಂದ ನಾಮಪತ್ರ ಸಲ್ಲಿಸಿದ್ದ ಮೋದಿಗೆ ಅಹಮದಾಬಾದ್ನಲ್ಲಿ ಟೀ ಮಾರುವ ಕಿರಣ್ ಮಹಿಂದಾ ಮತ್ತು ಹಿಂದಿನ ಬರೋಡಾ ರಾಜಮನೆತನದ ರಾಜಮಾತೆ ಶುಭಾಂಗಿನಿ ದೇವಿ ಅವರು ಸೂಚಕರಾಗಿ ಸಹಿ ಮಾಡಿದ್ದರು. ಇದೇ ತಂತ್ರವನ್ನು ವಾರಾಣಸಿಯಲ್ಲೂ ಬಳಸಲು ಮುಂದಾಗಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement