ರಾಜ್ಯದ ಜನತೆಗೆ ವಿದ್ಯುತ್ ಶಾಕ್...?
ರಾಜ್ಯದ ಜನತೆಗೆ ಬೇಸಿಗೆಯ ಬಿಸಿಲಿನ ಶಾಕ್ನೊಂದಿಗೆ ಕರೆಂಟ್ ಶಾಕ್ ನೀಡಲು..
ಬೆಂಗಳೂರು: ರಾಜ್ಯದ ಜನತೆಗೆ ಬೇಸಿಗೆಯ ಬಿಸಿಲಿನ ಶಾಕ್ನೊಂದಿಗೆ ಕರೆಂಟ್ ಶಾಕ್ ನೀಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್ಸಿ) ಮುಂದಾಗಿದ್ದು, ಶೀಘ್ರದಲ್ಲೇ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 66ಪೈಸೆ ಹೆಚ್ಚಿಸುವಂತೆ ವಿದ್ಯುತ್ ಕಂಪನಿಗಳು ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಚುನಾವಣೆ ಬಳಿಕ ಕೆಇಆರ್ಸಿ ಅಧಿಕೃತವಾಗಿ ಪರಿಷ್ಕೃತ ದರ ಪ್ರಕಟಿಸುವ ಸಾಧ್ಯತೆ ಇದೆ.
10 ಎಚ್ಪಿ ನೀರಾವರಿ ಪಂಪ್ಸೆಟ್, ಭಾಗ್ಯಜೋತಿ, ಕುಟೀರಜೋತಿ ಗ್ರಾಹಕರಿಗೆ ಈ ದರ ಹೆಚ್ಚಳ ಅನ್ವಯವಾಗುವುದಿಲ್ಲ.