ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆರ್‌ಜೆಡಿ ನಾಯಕನಿಂದ ಜಿಲ್ಲಾ ನ್ಯಾಯಾಧೀಶರಿಗೆ ಬೆದರಿಕೆ

ಆರ್‌ಜೆಡಿ ಸಂಸದ ಪ್ರಭುನಾಥ್ ಸಿಂಗ್ ಸರನ್‌ನ ಜಿಲ್ಲಾ ನ್ಯಾಯಾಧೀಶ ಹಾಗು ರಿಟರ್ನಿಂಗ್ ಆಫೀಸರ್ ಕುಂದನ್ ...

Rashmi Kasaragodu
Updated On : 23 Apr 2014, 3:53 am

ಸರನ್: ಆರ್‌ಜೆಡಿ ಸಂಸದ ಪ್ರಭುನಾಥ್ ಸಿಂಗ್ ಸರನ್‌ನ ಜಿಲ್ಲಾ ನ್ಯಾಯಾಧೀಶ ಹಾಗು ರಿಟರ್ನಿಂಗ್ ಆಫೀಸರ್ ಕುಂದನ್ ಕುಮಾರ್ ಅವರಿಗೆ ಬೆದರಿಕೆಯನ್ನೊಡ್ಡಿರುವ ಬಗ್ಗೆ ವರದಿಯಾಗಿದೆ. ನ್ಯಾಯಾಧೀಶರಿಗೆ ಬೆದರಿಕೆಯನ್ನೊಡ್ಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿರುವುದರಿಂದ ಸಿಂಗ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದುದಕ್ಕಾಗಿ ಕಳೆದ ವಾರ ಕುಂದನ್ ಕುಮಾರ್, ಸಿಂಗ್ ವಿರುದ್ಧ 2 ಎಫ್ ಐಆರ್ ದಾಖಲಿಸಿದ್ದರು.

ಮಂಗಳವಾರ ಈ ಎಫ್‌ಐಆರ್ ನ್ನು ಸ್ವೀಕರಿಸಿದ ನ್ಯಾಯಾಲಯ ಸಿಂಗ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

ಜಿಲ್ಲಾ ನ್ಯಾಯಾಧೀಶರು ಈ ಮೊದಲು ನಳಂದಾದಲ್ಲಿದ್ದರು. ಇವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಅಧಿಕಾರಿಗಳಲ್ಲೊಬ್ಬರಾಗಿದ್ದಾರೆ. ನಾನು ಸ್ಥಳೀಯ ದೇವಾಲಯವೊಂದಕ್ಕೆ ಹೋಗುತ್ತಿದ್ದೇನೆ. ನಾನು ಅಲ್ಲಿಂದ ಬರುವಾಗ ನನಗೊಂದು ಮತ್ತು ರಿಟರ್ನಿಂಗ್ ಆಫೀಸರಿಗೊಂದು ಕಫನ್ (ಶವಗಳನ್ನು ಮುಚ್ಚುವ ಬಟ್ಟೆ) ತೆಗೆದುಕೊಂಡು ಬರುತ್ತೇನೆ. ನನ್ನ ನಾಮಪತ್ರವನ್ನು ತಿರಸ್ಕರಿಸುವ ಬೆದರಿಕೆಗೆ ನಾನು ಅಂಜುವುದಿಲ್ಲ ಎಂದು ಆರ್‌ಜೆಡಿ ನಾಯಕ ಹೇಳುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಾರಾಜ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆರ್‌ಜೆಡಿ ಸಂಸದ ಈಗಾಗಲೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇದರ ವಿಚಾರರಣೆಯನ್ನು ಏಪ್ರಿಲ್ 25ಕ್ಕೆ ಮುಂದೂಡಲಾಗಿದೆ.

ಮಹಾರಾಜ್‌ಗಂಜ್‌ನಲ್ಲಿ ಮೇ.7 ಕ್ಕೆ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement