ನೂತನ ಸೇನಾ ಮುಖ್ಯಸ್ಥರಾಗಿ ದಲ್ಬೀರ್ ಸಿಂಗ್ ನೇಮಕ?
ನವದೆಹಲಿ: ಭಾರತೀಯ ಸೇನಾದಳದ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಪ್ರಸ್ತುತ ರಕ್ಷಣಾ ಇಲಾಖೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಲ್ಬೀರ್ ಸಿಂಗ್ ಅವರು, ತತ್ವ ಸಿದ್ದಾಂತಗಳನ್ನು ಪರಿಪಾಲಿಸುವ ದಕ್ಷ ಅಧಿಕಾರಿ ಎಂದು ಹೆಸರು ವಾಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಂದಿನ ಸೇನಾದಳದ ಮುಖ್ಯಸ್ಥರನ್ನಾಗಿ ಮಾಡಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಜುಲೈ 31ಕ್ಕೆ ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಕ್ರಂ ಸಿಂಗ್ ಅವರು ನಿವೃತ್ತರಾಗಲಿದ್ದು, ಆ ಸ್ಥಾನಕ್ಕೆ ಹಿರಿತನದ ಆಧಾರದ ಮೇಲೆ ದಲ್ಬೀರ್ ಸಿಂಗ್ರನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಪ್ರಸ್ತುತ ಮೇ - ಜೂನ್ನಲ್ಲಿ ಸೇನೆಯ ಹಲವು ಹಿರಿಯ ಅಧಿಕಾರಿಗಳು ನಿವೃತ್ತರಾಗಲಿದ್ದು, ಅವರ ಸ್ಥಾನಗಳಿಗೆ ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಲು ರಕ್ಷಣಾ ಇಲಾಖೆ ಸಿದ್ಧತೆ ನಡೆಸಿದೆ.