ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಅಲೆ ಮಾಧ್ಯಮ ಸೃಷ್ಟಿ: ಪ್ರಧಾನಿ ಸಿಂಗ್

ದೇಶದಲ್ಲಿ ನರೇಂದ್ರ ಮೋದಿ ಅಲೆ ಎಂಬುದಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ..

Vishwanath S
Updated On : 24 Apr 2014, 6:28 am

ನವದೆಹಲಿ: ದೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಎಂಬುದಿಲ್ಲ, ಇದೆಲ್ಲ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಇಂದು ದೇಶಾದ್ಯಂತ 6ನೇ ಹಂತದ ಮತದಾನ ನಡೆಯುತ್ತಿದ್ದು, ಅಸ್ಸಾಂನ 6 ಕ್ಷೇತ್ರಗಗಳು ಸೇರಿದಂತೆ 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಅಸ್ಸಾಂನ ಗುವಾಹತಿ ಲೋಕಸಭಾ ಕ್ಷೇತ್ರದ ದಿಸ್ಪುರ್‌ನಲ್ಲಿ ಇಂದು ಬೆಳಗ್ಗೆ ಮನಮೋಹನ್ ಸಿಂಗ್ ಪತ್ನಿ ಸಮೇತ ಮತದಾನ ಮಾಡಿದರು.

ಮತದಾನ ಬಳಿಕ ಮಾತನಾಡಿದ ಸಿಂಗ್, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಜನತೆ ಮೋದಿ ಜಪ ಮಾಡುತ್ತಿಲ್ಲ ಇದೆಲ್ಲ ಸುಳ್ಳು. ದೇಶದಲ್ಲಿ ಮೋದಿ ಅಲೆ ಎಂಬುದಿಲ್ಲ ಇದೆಲ್ಲ ಬರೀ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.

ಅಸ್ಸಾಂನಲ್ಲಿ 6 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ದುಬ್ರಿ, ಕೊಕ್ರಜಾರ್, ಗುವಾಹತಿ, ನೌವ್ಗೊಂಗ್, ಮಂಗಳದೈ ಮತ್ತು ಬರ್ಪೇಟದಲ್ಲಿ ಬೆಳಗಿನಿಂದಲೇ ಮತದಾನ ಬಿರಿಸಿನಿಂದ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement