2ಜಿ ಹಗರಣ: ಕರುಣಾನಿಧಿ ಪತ್ನಿ, ಪುತ್ರಿ ವಿರುದ್ಧ ಚಾರ್ಜ್‌ಶೀಟ್ ದಾಖಲು
ಲೋಕಸಭೆ ಚುನಾವಣೆ ವೇಳೆ 2ಜಿ ಸ್ಪೆಕ್ಟ್ರಂ ಹಗರಣ ಮತ್ತೊಮ್ಮೆ ಡಿಎಂಕೆಗೆ ಶಾಕ್ ನೀಡಿದ್ದು, ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್ ಹಾಗೂ ಪುತ್ರಿ ಕನಿಮೋಳಿ, ಎ.ರಾಜಾ ಸೇರಿ..
ನವದೆಹಲಿ: ಲೋಕಸಭೆ ಚುನಾವಣೆ ವೇಳೆ 2ಜಿ ಸ್ಪೆಕ್ಟ್ರಂ ಹಗರಣ ಮತ್ತೊಮ್ಮೆ ಡಿಎಂಕೆಗೆ ಶಾಕ್ ನೀಡಿದ್ದು, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್ ಹಾಗೂ ಪುತ್ರಿ ಕನಿಮೋಳಿ, ಮಾಜಿ ಕೇಂದ್ರ ಸಚಿವ ಎ.ರಾಜಾ ಸೇರಿದಂತೆ 19 ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ಚಾರ್ಜ್‌ಶೀಟ್ ದಾಖಲಿಸಿದೆ.
ಇಡಿ ಅಧಿಕಾರಿಗಳು ಇಂದು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಕರುಣಾನಿಧಿ ಪತ್ನಿ ದಯಾಳ್ ಅಮ್ಮಾಳ್, ಪುತ್ರಿ ಕನಿಮೋಳಿ, ಎ.ರಾಜಾ ಹಾಗೂ ಶಾಹಿದ್ ಬಲ್ವಾ ಸೇರಿದಂತೆ 19 ಆರೋಪಿಗಳ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಲಾಗಿದೆ. ಅಲ್ಲದೆ ಚಾರ್ಜ್‌ಶೀಟ್‌ನಲ್ಲಿ 10 ಕಂಪನಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ನಿನ್ನೆಯಷ್ಟೆ ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.