ಗೂಗಲ್ ಪ್ಲಸ್ ಮುಖ್ಯಸ್ಥ ವಿವೇಕ್ ಗುಂಡೋತ್ರಾ ರಾಜಿನಾಮೆ
ಗೂಗಲ್ ಪ್ಲಸ್ನ ಮುಖ್ಯಸ್ಥ ಭಾರತ ಮೂಲದ..
ನ್ಯೂಯಾರ್ಕ್: ಗೂಗಲ್ ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್ನ ಮುಖ್ಯಸ್ಥ ಭಾರತ ಮೂಲದ ವಿವೇಕ್ ಗುಂಡೋತ್ರಾ ರಾಜಿನಾಮೆ ನೀಡಿದ್ದಾರೆ.
ಮೂರು ವರ್ಷಗಳ ಹಿಂದೆಯಷ್ಟೇ ಗೂಗಲ್ ಪ್ಲಸ್ ಆರಂಭವಾಗಿದ್ದರೂ, ಗೂಗಲ್ (ಸಾಮಾಜಿಕ ತಾಣ)ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿವೇಕ್ ಕಳೆದ ಎಂಟು ವರ್ಷಗಳಿಂದ ಪ್ರಸ್ತುತ ಸಂಸ್ಥೆಯಲ್ಲಿ ದುಡಿಯುತ್ತಿದ್ದರು.
ಕಳೆದ ಎಂಟು ವರ್ಷಗಳಿಂದ ಗೂಗಲ್ನಲ್ಲಿ ದುಡಿಯುತ್ತಿದ್ದ ನಾನು ಇದೀಗ ಕಂಪನಿಯಿಂದ ಹೊರನಡೆಯುತ್ತಿದ್ದೇನೆ. ಗೂಗಲ್ ಕಂಪನಿಯಲ್ಲಿರುವ ಜನರೊಡನೆ ಕೆಲಸ ಮಾಡಿದ್ದು ನನಗೆ ಖುಷಿ ನೀಡಿದೆ ಎಂದು ರಾಜಿನಾಮೆ ನೀಡಿದ ವಿವೇಕ್ ಹೇಳಿದ್ದಾರೆ.
ಆದಾಗ್ಯೂ, ಗೂಗಲ್ ತೊರೆದ ನಂತರ ಮುಂದಿನ ಯೋಜನೆ ಏನು ಎಂಬುದರ ಬಗ್ಗೆ ವಿವೇಕ್ ಇನ್ನೂ ತಿಳಿಸಿಲ್ಲ ಎಂದು ಬಲ್ಲಮೂಲಗಳು ವರದಿ ಮಾಡಿವೆ.