ದೇವಿಶ್ರೀ ಸ್ವಾಮೀಜಿ ರಾಸಲೀಲೆ ವಿಡಿಯೋ ಬಹಿರಂಗ
ನಿತ್ಯವೂ ನೂರಾರು ಭಕ್ತರ ಭವಿಷ್ಯ ಹೇಳುತ್ತಿದ್ದ ಜೋತಿಷಿ ರಾಮಸ್ವಾಮಿ ..
ಬೆಂಗಳೂರು: ನಿತ್ಯವೂ ನೂರಾರು ಭಕ್ತರ ಭವಿಷ್ಯ ಹೇಳುತ್ತಿದ್ದ ಜೋತಿಷಿ ರಾಮಸ್ವಾಮಿ ದೇವಿಶ್ರೀ ಸ್ವಾಮೀಜಿಯ 'ಕಾಮಪುರಾಣ' ಶನಿವಾರ ಬಯಲಾಗಿದೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಎರಡು ಕಡೆ ಜೋತಿಷ್ಯಾಲಯ ನಡೆಸುತ್ತಿದ್ದ ದೇವಿಶ್ರೀ ಸ್ವಾಮೀಜಿ ಯುವತಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋವೊಂದು ಮಾಧ್ಯಮಗಳಿಗೆ ಬಿಡುಗಡೆಯಾಗಿದೆ.
ಭವಿಷ್ಯ ಕೇಳಲು ತನ್ನ ಕಚೇರಿಗೆ ಆಗಮಿಸಿದ ಯುವತಿಗೆ ಸ್ವಾಮೀಜಿ ಮುತ್ತು ನೀಡುತ್ತಿರುವ ದೃಶ್ಯ ಆತನ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಇಂದು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ.
ರಾಸಲೀಲೆಯ ವಿಡಿಯೋ ಬಹಿರಂಗವಾಗುತ್ತಿದ್ದಂತೆ ನೂರಾರು ಜನ ಅವರ ಕಚೇರಿ ಬಳಿ ಜಮಾಯಿಸಿದ್ದು, ಸ್ವಾಮೀಜಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಆದರೆ ಕಾಮಿ ಸ್ವಾಮಿ ಮಾತ್ರ ತಲೆಮರೆಸಿಕೊಂಡಿದ್ದಾರೆ.
ರಾಸಲೀಲೆ ನಡೆಸಿ ಸಿಕ್ಕಿಬಿದ್ದ ಸ್ವಾಮೀಜಿಯ ಹಿನ್ನಲೆ
ಮೂಲತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದವರಾದ ದೇವಿಶ್ರೀ ಸ್ವಾಮೀಜಿಯ ಮೂಲ ಹೆಸರು ರಾಮು. ಶಾಲಾ ದಾಖಲಾತಿಗಳಲ್ಲಿ ಇವರ ಹೆಸರು ದೇವಿಪ್ರಸಾದ್ ಎಂದಿದೆ.
ವಿದ್ಯಾಭ್ಯಾಸದ ಬಳಿಕ ಮುಳಬಾಗಿಲು ಪಟ್ಟಣದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಸ್ವಾಮೀ ಪ್ರಸ್ತೂತ ಎಚ್‌ಎಸ್‌ಆರ್‌ಲೇಔಟ್‌ನ 11 ಕ್ರಾಸ್‌ನಲ್ಲಿ ವಾಸವಾಗಿದ್ದಾರೆ.