ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಟ್ಟಾ ಮತ್ತು ಅಜರುದ್ದೀನ್ ಜೊತೆಗಿರೊ ಫೋಟೋ ರಿಲೀಸ್

ಕಾಂಗ್ರೆಸ್‌ನ ಹವಾಲ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ...

Vishwanath S
Updated On : 28 Apr 2014, 7:59 am

ನವದೆಹಲಿ: ಕಾಂಗ್ರೆಸ್‌ನ ಹವಾಲ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಅಜರುದ್ದೀನ್ ಮತ್ತು ಸೂರತ್ ಮೂಲದ ಹವಾಲ ಕಿಂಗ್‌ಪಿನ್ ಅಫ್ರೋಜ್ ಪಟ್ಟಾ ಜೊತೆಗಿನ ಫೋಟೋ ಒಂದನ್ನು ಸೋಮವಾರ ಬಿಡುಗಡೆ ಮಾಡಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೂ ಸೂರತ್ ಮೂಲದ ಹವಾಲ ಕಿಂಗ್‌ಪಿನ್ ಅಫ್ರೋಜ್ ಪಟ್ಟಾರೊಂದಿಗೆ ಸಂಬಂಧವಿದೆ ಎಂದು ಆರೋಪಸಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಬಿಜೆಪಿ, ಅಜರುದ್ದೀನ್ ಹಾಗೂ ಪಟ್ಟಾ ಇರುವ ಭಾವಚಿತ್ರವನ್ನು ರಿಲೀಸ್ ಮಾಡಿ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿದೆ.

ಹವಾಲಾ ಹಗರಣದ ಪ್ರಮುಖ ಆರೋಪಿ ಪಟ್ಟಾನೊಂದಿಗೆ ನರೇಂದ್ರ ಮೋದಿ ಸಂಪರ್ಕ ಹೊಂದಿದ್ದಾರೆ ಎಂದು ರಣದೀಪ್ ಆರೋಪಿಸಿದ್ದು, ಕಳೆದ ತಿಂಗಳಷ್ಟೆ ಪಟ್ಟಾ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಹವಾಲಾ ಆರೋಪ ಎದುರಿಸುತ್ತಿರುವ ಪಟ್ಟಾನನ್ನು ರಕ್ಷಿಸುತ್ತಿರುವುದು ಏಕೆ? ಆತನಿಗೂ ನಿಮಗೂ ಏನು ಸಂಬಂಧ? ಎಂಬುದನ್ನು ದೇಶದ ಜನತೆಯ ಮುಂದೆ ಮೋದಿ ಬಹಿರಂಗಪಡಿಸಬೇಕು ಎಂದು ಸಂದರ್ಶನವೊಂದರಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುಜರ್‌ವಾಲಾ ಅವರು ಆಗ್ರಹಿಸಿದ್ದರು.

ಈ ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯ ರಾಹುಲ್ ಗಾಂಧಿ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ಹವಾಲಾ ಏಜೆಂಟಗಳೊಂದಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದರು. ಅಲ್ಲದೆ ಉದ್ಯಮಿ ಅದಾನಿಗೆ ಮೋದಿ 40 ಸಾವಿರ ಕೋಟಿ ರುಪಾಯಿ ಮೌಲ್ಯದ ಭೂಮಿ ನೀಡಿದ್ದಾರೆ ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement