ಪವನ್ ವಿರುದ್ಧ ಕೇಸ್ ದಾಖಲಿಸಿ, ಪೊಲೀಸರಿಗೆ ಕೋರ್ಟ್ ಸೂಚನೆ
ಹೈದರಾಬಾದ್: ಟಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ವಿರುದ್ಧ ಕಿಡಿ ನುಡಿಗಳನ್ನಾಡಿದ್ದ ಆಂಧ್ರಪ್ರದೇಶದ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ನಟ ಪವನ್ ಕಲ್ಯಾಣ್ ವಿರುದ್ಧ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಸೋಮವಾರ ಆದೇಶಿಸಿದೆ.
ಕೆ. ಚಂದ್ರಶೇಖರ್ ರಾವ್ ವಿರುದ್ಧ ಕಿಡಿ ನುಡಿಗಳನ್ನಾಡಿದ್ದ ಪವನ್ ಕಲ್ಯಾಣ್ ವಿರುದ್ಧ ರವಿ ಎಂಬುವರು ನಿಜಾಮಾಬಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪವನ್ ವಿರುದ್ಧ ಕೇಸು ದಾಖಲಿಸುವಂತೆ ಡಿಚ್‌ಪಲ್ಲಿ ಪೊಲೀಸರಿಗೆ ಸೂಚಿಸಿದೆ.
ತೆಲಂಗಾಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಪವನ್ ಕಲ್ಯಾಣ್, ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಹೆಚ್ಚು ಕಡಿಮೆ ಮಾತನಾಡಿದರೆ ಒಂದು ಕೈ ನೋಡಿಕೊಳ್ಳಬೇಕಾಗುತ್ತದೆ. ಮುಂದೆ ದೇಶದ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ವಿರುದ್ಧ ಹಗುರವಾಗಿ ಮಾತನಾಡಿರುವ ಕೆಸಿಆರ್ ಚರ್ಮ ಸುಲಿಬೇಕಾಗುತ್ತದೆ ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕೆಸಿಆರ್, ಪ್ರತಿ ದಿನ ನನ್ನ ವಿರುದ್ಧ ಹತ್ತಾರು ನಾಯಿಗಳು ಬೋಗಳುತ್ತವೆ ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ತೆಲಂಗಾಣ ನೆಲದಲ್ಲಿ ನಿಂತುಕೊಂಡು ನನ್ನ ವಿರುದ್ಧ ಮಾತನಾಡ್ತಾನಾ. ನಾನು ಮನಸ್ಸು ಮಾಡಿ ಚಿಟಿಕೆ ಹೊಡೆದರೆ ಅವನು ಸಾವಿರ ಪೀಸ್ ಪೀಸ್ ಹಾಕ್ತಾನೆ ಎಂದು ಗುಡುಗಿದ್ದರು.