ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಿಯಾಂಕರಿಂದ ಕೀಳು ಮಟ್ಟದ ಭಾಷಣ: ಅರುಣ್ ಜೇಟ್ಲಿ

ಭಾರತೀಯ ಜನತಾ ಪಕ್ಷದ ಮುಖಂಡರನ್ನು ಹೆದರಿದ ಇಲಿಗಳು ಎಂದು ಜರಿಯುವ...

Vishwanath S
Updated On : 28 Apr 2014, 3:59 am

ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡರನ್ನು ಹೆದರಿದ ಇಲಿಗಳು ಎಂದು ಜರಿಯುವ ಮೂಲಕ ಪ್ರಿಯಾಂಕ ಗಾಂಧಿ ಅವರು ರಾಜಕೀಯ ಭಾಷಣವನ್ನು ಕೀಳು ಮಟ್ಟಕ್ಕೆ ಇಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರು ಸೋಮವಾರ ದೂರಿದ್ದಾರೆ.

ಬಿಜೆಪಿ ಮುಖಂಡರು ಬೆದರಿದ ಇಲಿಗಳಲ್ಲ ಎಂದಿರುವ ಜೇಟ್ಲಿ, ಪ್ರಿಯಾಂಕರ ಕೀಳು ಮಟ್ಟದ ಭಾಷಣದಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಕುಟುಂಬ ಕಾನೂನಿಗೆ ಹೆದರಬೇಕಾಗಿದೆ ಎಂದರು. ಪ್ರಿಯಾಂಕ ಅವರು ತೀರ ಕೀಳು ಮಟ್ಟದ ಭಾಷೆ ಬಳಸುವ ಮೂಲಕ ರಾಜಕೀಯ ಪ್ರಚಾರದ ಬೆಲೆಯನ್ನು ಕುಗ್ಗಿಸಿದ್ದಾರೆ ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಒಂದು ವೇಳೆ ನನ್ನ ಕುಟುಂಬದ ಯಾರಾದರು ಎದುರಾಳಿ ಪಕ್ಷದವರನ್ನು ಇಲಿಗಳು ಎಂದು ಜರಿದಿದ್ದರೆ ನನಗೆ ಬೇರಸವಾಗುತ್ತಿತ್ತು. ಆದರೆ ಯಾವುದೇ ತಡೆ ಇಲ್ಲದೆ ಮಾತನಾಡುವ ಪ್ರಿಯಾಂಕ ರಾಜಕೀಯ ಭಾಷಣಕ್ಕೆ ಕಳಂಕ ತಂದಿದ್ದಾರೆ ಎಂದು ಕುಟುಕಿದ್ದಾರೆ.

 ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಭೂ ಅಕ್ರಮಗಳಿಗೆ ಸಂಬಂಧಿಸಿ ಬಿಜೆಪಿ ವಿಡಿಯೋ ಮತ್ತು ಕಿರು ಹೊತ್ತಗೆ ಬಿಡುಗಡೆ ಮಾಡಿತ್ತು. 'ರಾಬರ್ಟ್ ಅಭಿವೃದ್ಧಿ ಮಾದರಿ' ಯಶಸ್ವಿಯಾಗಲು ಗಾಂಧಿ ಕುಟುಂಬದ ಕೃಪಾಕಟಾಕ್ಷವೇ ಕಾರಣ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ ಗಾಂಧಿ, ಬಿಜೆಪಿ ಮುಖಂಡರು ಹೆದರಿದ ಇಲಿಗಳು ಎಂದು ಜರಿದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement