ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಬಹಿರಂಗ ಕ್ಷಮೆಯಾಚಿಬೇಕು: ಟಿಎಂಸಿ

Vishwanath S
Updated On : 28 Apr 2014, 4:21 am

ಕೊಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರ ಪೇಂಟಿಂಗ್ ಬಗ್ಗೆ ಮಾತನಾಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ತೃಣಮೂಲ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಮೋದಿ ಒಬ್ಬ ಕಟುಕ ಎಂದು ಟೀಕಿಸಿದ್ದು, ಮಮತಾರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸೋಮವಾರ ಪಟ್ಟು ಹಿಡಿದಿದೆ.

ಮಮತಾ ಬ್ಯಾನರ್ಜಿಯ ಪೇಂಟಿಂಗ್ ಬಗ್ಗೆ ಮಾತನಾಡಿದ ಮೋದಿ, ಮಮತಾರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲದ್ದಿದ್ದರೆ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಟಿಎಂಸಿ ಎಚ್ಚರಿಕೆ ನೀಡಿದೆ. ಬಂಗಾಳದ ಅಭಿವೃದ್ಧಿ ಮಾದರಿ ಬಗ್ಗೆ ಯಾವುದೇ ಉತ್ತರವಿಲ್ಲದ ಈ ಗುಜರಾತ್ ಕಟುಕ, ಮಮತಾ ಪೇಂಟಿಂಗ್ 1.8 ರುಪಾಯಿಗೆ ಮಾರಾಟವಾಯಿತು ಎನ್ನುತ್ತಾರೆ. ಆತ ಅದನ್ನು ನಿರೂಪಿಸಲಿ, ಇಲ್ಲದಿದ್ದರೆ ಮಾನಹಾನಿ ಮೊಕದ್ದಮೆ ಎದುರಿಸಲಿ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಮುಕುಲ್ ರಾಯ್ ಹೇಳಿದ್ದಾರೆ.

ಶ್ರೀರಾಮಪುರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿ, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಮತಾ ಬ್ಯಾನರ್ಜಿ ಅವರ ಪೇಂಟಿಂಗ್‌ಗಳು ಮೊದಲು ಎಂಟರಿಂದ ಹತ್ತು ಲಕ್ಷಕ್ಕೆ ಮಾರಾಟವಾಗುತ್ತಿದ್ದವು. ಆದರೆ ಈಗ ಒಂದು ಪೇಂಟಿಂಗ್ 1.8 ಕೋಟಿ ರುಪಾಯಿಗೆ ಮಾರಾಟವಾಗಿದೆ. ಇದ್ದಕ್ಕಿದ್ದಂತೆ ನಿಮ್ಮ ಕಲೆಯ ಬೆಲೆಯನ್ನು ಗುರುತಿಸಿದ್ದು ಯಾರು? ಆ ಪೇಂಟಿಂಗ್ ಕೊಂಡವರು ಯಾರು? ಎಂದು ಪ್ರಶ್ನಿಸಿದ್ದರು. ಅಲ್ಲದೆ ಶಾರದಾ ಚಿಟ್‌ಫಂಡ್ ಹಗರಣದ ಆರೋಪಿಗಳಿಗೆ ಪಶ್ಚಿಮ ಬಂಗಾಳದ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ರಾಜಕಾರಣಿಗಳ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪ ಹಾಗೂ ಪ್ರತ್ಯಾರೋಪಗಳಲ್ಲಿ ನಿಯತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement