ಹಳಿ ತಪ್ಪಿದ ಡೊನ್ ಎಕ್ಸ್‌ಪ್ರೆಸ್: ನಾಲ್ವರಿಗೆ ಗಾಯ
ಲಖನೌ: ಉತ್ತರಪ್ರದೇಶದಲ್ಲಿ ಡೊನ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಹೌರಾದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲು ಲಖನೌನಿಂದ ಸುಮಾರು 125 ಕಿ.ಮೀ ದೂರದ ಜಫರ್‌ಗಂಜ್ ರೈಲ್ವೆ ನಿಲ್ದಾಣದ ಫೈಝಾಬಾದ್ ಬಳಿ ರೈಲಿನ 6 ಸ್ಪೀಪರ್ ಕೋಚ್ ಸೇರಿ 2 ಸಾಮಾನ್ಯ ಬೋಗಿಗಳು ಹಳಿ ತಪ್ಪಿದ್ದು, ಈ ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಹೆಚ್ಚುವರಿ ತರಬೇತುದಾರರ ತಂಡವನ್ನು ಹಾಗೂ ಆಂಬ್ಯುಲೇಸ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.