ಎಸ್ಟಿ/ಎಸ್ಟಿ ಕಾಯ್ದೆಯಡಿ ಬಾಬಾ ರಾಮ್ದೇವ್ ಬಂಧನ ಸಾಧ್ಯತೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...
ಗೋರಖ್ಪುರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ಪಿಕ್ನಿಕ್ ಮತ್ತು ಹನಿಮೂನ್' ನಡೆಸಲು ದಲಿತರ ಮನೆಗಳಿಗೆ ಹೋಗುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ದೇವ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಮತ್ತೆ ಎರಡು ಕೇಸುಗಳು ದಾಖಲಾಗಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ.
ರಾಹುಲ್ ಗಾಂಧಿ ಪಿಕ್ನಿಕ್ ಮತ್ತು ಹನಿಮೂನ್ ನಡೆಸಲು ದಲಿತರ ಕೆರಿಗೆ ಹೋಗುತ್ತಾರೆ ಎಂಬು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಬಾಬಾ ರಾಮ್ದೇವ್ಗೆ ಇದೀಗ ಬಂಧನದ ಭೀತಿ ಶುರುವಾಗಿದೆ. ಆಸ್ಪೃಶ್ಯತೆ ಬೋದನೆ ಮತ್ತು ಆಚರಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಈ ಕಾಯ್ದೆಯಡಿ ರಾಮ್ದೇವ್ರನ್ನು ಪೊಲೀಸರು ಬಂಧಿಸುವ ಸಾಧ್ಯತೆ.
ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಹಿಮಾಚಲ ಪ್ರದೇಶ ಮತ್ತು ಅಮೇಥಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸದಂತೆ ಚುನಾವಣಾ ಆಯೋಗ ನಿಷೇಧ ಏರಿತ್ತು.
ರಾಮ್ದೇವ್ ವಿರುದ್ಧ ಗೋರಖ್ಪುರದಲ್ಲಿ ಭಾನುವಾರ ಸಂಜೆ ಎಫ್ಐಆರ್ ದಾಖಲಾಗಿದ್ದು, ಪಟನಾ ಮತ್ತು ಆಗ್ರಾಗಳಲ್ಲೂ ಇನ್ನೆರಡು ಎಫ್ಐಆರ್ಗಳು ಇದೇ ಕಾಯ್ದೆಯಡಿ ದಾಖಲಾಗಿವೆ. ಬಿಹಾರದ ಆಹಾರ ಮತ್ತು ಗ್ರಾಹಕ ರಕ್ಷಣಾ ಸಚಿವ ಶ್ಯಾಮ್ ರಜಕ್ ಹಾಗೂ ಆಗ್ರಾದ ಡಾ. ಬಿ.ಆರ್ ಅಂಬೇಡ್ಕರ್ ಬಾರ್ ಅಸೋಸಿಯೇಶನ್ ಸದಸ್ಯರು ಆಗ್ರಾದಲ್ಲಿ ಎಸ್ಸಿ-ಎಸ್ಟಿ ರಕ್ಷಣಾ ಕಾಯ್ದೆಯಡಿ ರಾಮ್ದೇವ್ ವಿರುದ್ಧ ಕೇಸು ದಾಖಲಿಸಿದ್ದಾರೆ.
''ರಾಮ್ದೇವ್ ಅವರ ಹನಿಮೂನ್ ಹೇಳಿಕೆಗೆ ಇಡೀ ದೇಶ- ವಿಶೇಷವಾಗಿ ದಲಿತ ಸಮುದಾಯ ಆಕ್ರೋಶಗೊಂಡಿದೆ. ಇದು ದೇಶದ ಸಂಸ್ಕೃತಿ ಮೇಲೆ ನಡೆದ ದಾಳಿಯಾಗಿದ್ದು, ರಾಮ್ದೇವ್ ಮಹಿಳಾ ಸಮುದಾಯವನ್ನೂ ಅವಮಾನಿಸಿದ್ದಾರೆ'' ಎಂದು ಎಫ್ಐಆರ್ ದಾಖಲಿಸಿದ ಗೋರಖ್ಪುರ ಮೂಲದ ವಕೀಲ ಉದಯ್ನಾಥ್ ಹೇಳಿದ್ದಾರೆ.