ಐಪಿಎಲ್ ಸ್ಪಾಟ್ ಫಿಕ್ಸಿಂಗ್: ತೀರ್ಪು ಕಾಯ್ದಿರಿಸಿದ ಸುಪ್ರೀಂ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚನೆ ಮಾಡುವ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ಕಾಯ್ದಿರಿಸಿತು.
ಬಿಸಿಸಿಐ ಪದಚ್ಯುತ ಅಧ್ಯಕ್ಷ ಎನ್. ಶ್ರೀನಿವಾಸನ್ ಹಾಗೂ ಇತರೆ 12 ಮಂದಿ ಕ್ರಿಕೆಟಿಗರ ವಿರುದ್ಧದ ಪ್ರಕರಣವನ್ನು ಮುದ್ಗಲ್ ಸಮಿತಿಯಿಂದ ತನಿಖೆ ನಡೆಸುವಂತೆ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರ ನೇತೃತ್ವದ ನ್ಯಾಯಪೀಠ ಸಲಹೆ ನೀಡಿತ್ತು.
ನ್ಯಾಯಾಮೂರ್ತಿ ಮುದ್ಗಲ್ ನೇತೃತ್ವದ ಸಮಿತಿಯು ನಡೆಸುವ ತನಿಖೆಯಲ್ಲಿ ತನಗೆ ನಂಬಿಕೆ, ವಿಶ್ವಾಸವಿಲ್ಲ ಎಂದು ಬಿಸಿಸಿಐ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶವನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಎನ್. ಶ್ರೀನಿವಾಸನ್ ಹಾಗೂ ಇತರೆ 12 ಕ್ರಿಕೆಟಿಗರ ವಿರುದ್ಧದ ಸ್ಪಾಟ್ ಫಿಕ್ಸಿಂಗ್ ಬೆಟ್ಟಿಂಗ್ ಹಗರಣದ ತನಿಖೆಯನ್ನು ಹೊಸ ಸಮಿತಿ ನಡೆಸಲಿದೆ.