'ನೋಕಿಯಾ'ದ ಮುಖ್ಯಸ್ಥರಾಗಿ ರಾಜೀವ್ ಸೂರಿ ನೇಮಕ
ನವದೆಹಲಿ: ಮೊಬೈಲ್ ಹ್ಯಾಂಡ್ಸೆಟ್ಗಳ ದಿಗ್ಗಜ 'ನೋಕಿಯಾ' ಸಂಸ್ಥೆಯ ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ಭಾರತ ಮೂಲದ ರಾಜೀವ್ ಸೂರಿ ಅವರು ಮಂಗಳವಾರ ನೇಮಕಗೊಂಡಿದ್ದಾರೆ.
ಮಣಿಪಾಲ್ ಇನ್ಸ್ಟಿಟೂಟ್ ಮತ್ತು ಟೆಕ್ನಾಲಜಿಯಿಂದ(ಎಂಐಟಿ) ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿರುವ 46 ವಯಸ್ಸಿನ ಸೂರಿ ಅವರು, ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ ಸ್ವಾಧೀನಪಡಿಸಿಕೊಂಡ ನೋಕಿಯಾದ ಮೊಬೈಲ್ ಹ್ಯಾಂಡ್ಸೆಟ್ ವಹಿವಾಟು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನೋಕಿಯಾದ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ಟೀಫನ್ ಇಲೋಪ್ ಅವರು ಪುನಃ ತಮ್ಮ ಮಾತೃಸಂಸ್ಥೆಯಾದ ಮೈಕ್ರೊಸಾಫ್ಟ್ಗೆ ಹಿಂದಿರುಗಿದ್ದರಿಂದ ಖಾಲಿಯಾದ ಸಿಇಒ ಹುದ್ದೆಯು ಇದೀಗ ರಾಜೀವ್ ಸೂರಿ ಅವರಿಗೆ ಒಲಿದಿದೆ. 1995ರಲ್ಲಿ ನೋಕಿಯಾ ಸಮೂಹ ಸೇರಿದ ಸೂರಿ ಅವರು ನೋಕಿಯಾ ಸೊಲ್ಯೂಷನ್ಸ್ ಅಂಡ್ ನೆಟ್ವರ್ಕ್ನ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.