ಬಿಜೆಪಿ ಜತೆ ಕೈಜೋಡಿಸಿದ್ದಕ್ಕಾಗಿ ಗ್ಯಾಂಗ್‌ರೇಪ್: ಮಹಿಳೆ ಆರೋಪ
ಬಿಜೆಪಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಕ್ಕಾಗಿ ಸುಮಾರು 12ಕ್ಕಿಂತ ಹೆಚ್ಚು ಜನರು ತನ್ನ ಮೇಲೆ...
ರಾಂಚಿ: ಬಿಜೆಪಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಕ್ಕಾಗಿ ಸುಮಾರು 12ಕ್ಕಿಂತ ಹೆಚ್ಚು ಜನರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ರಾಂಚಿಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ 30ರ ಹರೆಯದ ಮಹಿಳೆಯೊಬ್ಬರು ಈ ರೀತಿ ಆರೋಪ ಮಾಡಿದ್ದಾರೆ. ಸೋಮವಾರ ತನ್ನ ಮನೆ ಮೇಲೆ ಗುಂಪೊಂದು ದಾಳಿ ಮಾಡಿದ್ದು, ತನ್ನ 13ರ ಹರೆಯದ ಮಗಳನ್ನು ದೌರ್ಜನ್ಯಗೊಳಪಡಿಸಿದ್ದಾರೆ. ದಾಳಿ ನಡೆದ ವೇಳೆ ಆಕೆಯ ಗಂಡನ ಕೈಯನ್ನು ದುಷ್ಕರ್ಮಿಗಳು ಕಟ್ಟಿ ಹಾಕಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಖಂಡ್ ಪೊಲೀಸ್ ವಕ್ತಾರ ಅನುರಾಗ ಗುಪ್ತಾ , ಈ ದಾಳಿಯ ಹಿಂದೆ ರಾಜಕೀಯ ಕೈವಾಡವಿದೆ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಅಲ್ಪ ಸಂಖ್ಯಾತರನ್ನು ಓಲೈಸಲು ಬಿಜೆಪಿ ಇದೀಗ ಅಲ್ಪಸಂಖ್ಯಾತರನ್ನು ತಮ್ಮತ್ತ ಸೆಳೆಯುತ್ತಿದೆ. ಏತನ್ಮಧ್ಯೆ, ಬಿಜೆಪಿ ಜತೆ ಕೆಲಸ ಮಾಡಿದುದಕ್ಕೆ ಗ್ಯಾಂಗ್‌ರೇಪ್‌ಗೊಳಗಾಗಿದ್ದೀನಿ ಎಂದು ಮಹಿಳೆ ಆರೋಪ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ.