ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

7ನೇ ಹಂತ: 9 ರಾಜ್ಯಗಳ ಮತದಾನ ಮುಕ್ತಾಯ

Vishwanath S
Updated On : 30 Apr 2014, 8:18 am

ನವದೆಹಲಿ: ನೂತನ ರಾಜ್ಯ ತೆಲಂಗಾಣದ 119 ವಿಧಾನಸಭಾ ಕ್ಷೇತ್ರ, ಎರಡು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 9 ರಾಜ್ಯಗಳ ಒಟ್ಟು 89 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಇಂದು ನಡೆದ 7ನೇ ಹಂತದ ಮತದಾನದಲ್ಲಿ ಏಳು ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 2009ಕ್ಕೆ ಹೋಲಿಸಿದರೆ ಈ ಸಲ ಬಾರಿ ಪ್ರಮಾಣದಲ್ಲಿ ಮತದಾನವಾಗಿದೆ. ಪಶ್ಚಿಮಬಂಗಾಳ11 ಕ್ಷೇತ್ರಗಳ ಪೈಕಿ ಶೇ. 81ರಷ್ಟು ಮತದಾನವಾಗಿದ್ದು, ಇಂದು ನಡೆದ ಮತದಾನದಲ್ಲಿ ಹೆಚ್ಚು ಮತದಾನವಾಗಿರುವ ರಾಜ್ಯವಾಗಿದೆ.

ಗುಜರಾತ್(26), ತೆಲಂಗಾಣ(17), ಪಂಜಾಬ್(13), ಉತ್ತರ ಪ್ರದೇಶ(11), ಪಶ್ಚಿಮಬಂಗಾಳ(9), ಬಿಹಾರ(7), ಕಾಶ್ಮೀರ(1) ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 2 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಇದರಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸುಮಾರು 13.83 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾರೆ.

 
   ರಾಜ್ಯಗಳು                2014ರ ಶೇಕಡವಾರು ಮತದಾನ        
ಪಂಜಾಬ್                                     73
ಗುಜರಾತ್                                   62                                             
ತೆಲಂಗಾಣ                                  70
ಉತ್ತರ ಪ್ರದೇಶ                            57
ಪಶ್ಚಿಮಬಂಗಾಳ                           81                                                
ಬಿಹಾರ                                       60




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement