ಅಕ್ಷಯ ತೃತೀಯ:ಬಂಗಾರದೊಡವೆ ಬೇಕೆ?
ಮೇ 2 ಶುಕ್ರವಾರ, 2014 ಅಕ್ಷಯ ತೃತೀಯ...
ಮೇ 2 ಶುಕ್ರವಾರ, 2014 ಅಕ್ಷಯ ತೃತೀಯ ; ತನ್ನಿಮಿತ್ತ ಈ ಸಾಂದರ್ಭಿಕ ಲೇಖನ
ಭಾರತೀಯ ಹಬ್ಬಗಳ ಸಾಲಿನಲ್ಲಿ ಅಕ್ಷಯ ತದಿಗೆಗೆ ಶ್ರೇಷ್ಠ ಸ್ಥಾನವಿದೆ. ಅದು ಮಂಗಲ ಮುಹೂರ್ತ. ಜೀವನದ ಉತ್ಕರ್ಷದ ಬಗ್ಗೆ ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾಸುದಿನ, ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ನಲ್ಲಿ ಅಮಾವಾಸ್ಯೆ ಕಳೆದು ಬರುವ ವೈಶಾಖ ಮಾಸದ ಮೂರನೇ ದಿನ ಅಕ್ಷಯ ತೃತೀಯ. ಧಾಮರ್ಿಕ ನಂಬಿಕೆಯುಳ್ಳವರಿಗೆ, ಉತ್ತರೋತ್ತರ ಯಶಸ್ಸು ಅಭಿವದ್ಧಿಗೆ ನಾಂದಿ ಹಾಡುವ ದಿನ. ಸಾಮಾಜಿಕ ನಿರ್ಬಂಧ, ಧಾಮರ್ಿಕ ಬೇಧವಿಲ್ಲದೇ ಎಲ್ಲ ವರ್ಗದವರೂ ಈ ದಿನಕ್ಕೆ ವಿಶೇಷ ಪ್ರಾಧಾನ್ಯ ಕೊಡುತ್ತಾರೆ.
ಅಕ್ಷರಾಭ್ಯಾಸ, ಮದುವೆ, ಮುಂಜಿ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ನಂಬಿಕೆ, ಅಂತೆಯೇ ದಾನಕ್ಕೂ ಪ್ರಶಸ್ತವೆನಿಸಿರುವ ಈ ಶುಭ ದಿನದ ಆಚರಣೆಗಿರುವ ಸಾಮಾಜಿಕ-ಆಥರ್ಿಕ ಹಿನ್ನೆಲೆ, ಧಾಮರ್ಿಕ ಹಾಗೂ ಆಧ್ಯಾತ್ಮಿಕ ಮಹತ್ವ ,ಖರೀದಿ-ಹೂಡಿಕೆಗಳ ಸಂಪ್ರದಾಯದ ಹಿಂದಿನ ಔಚಿತ್ಯ, ಇವೆಲ್ಲದರ ಅವಲೋಕನ ಇಲ್ಲಿದೆ.
ಅಕ್ಷಯ ತೃತೀಯ; ಪುರಾಣದ ನಂಟು
ದಕ್ಷಿಣಾಯನದಲ್ಲಿ ವಿಜಯ ದಶಮಿಯಾದರೆ ಉತ್ತರಾಯಣದಲ್ಲಿ ಅಕ್ಷಯ ತದಿಗೆ ಇವೆರಡೂ ತಿಥಿ ಪ್ರಧಾನವಾಗಿ ಗುರುತಿಸಲ್ಪಡುವ ದಿನಗಳು. ಅಕ್ಷಯತದಿಗೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಾಗಿದೆ. ಅಕ್ಷಯತದಿಗೆ ದಿನದಂದೇ ಮಹಷರ್ಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಅರಂಭಿಸಿದರಂತೆ. ಮಂಗಲಕಾರಕ ಮುಹೂರ್ತಗಳಲ್ಲಿ ಇದೂ ಒಂದು. ಭಗವಾನ್ ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ಪರಶುರಾಮನ ಜನನ ಇದೇ ದಿನವೆಂದು ಪ್ರತೀತಿ.
ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ. ಅದರಂತೆ ಇದು ಕಲ್ಪಾದಿಯ ದಿನವೂ ಅಹುದು. ಚೈತ್ರ ಮಾಸದಲ್ಲಿ ಪೂಜೆಗೊಳ್ಳುತ್ತಾ ಬಂದಿದ್ದ ಡೋಲಾಗೌರಿಯ ಪೂಜೆಗೆ ಇಂದು ಕೊನೆಯ ದಿನ. ಸುಮಂಗಲಿಯರ ಇಂದಿನ ಸಡಗರ ಸಂಭ್ರಮಗಳ ಸೊಗಸನ್ನು ನೋಡಿಯೇ ಅನುಭವಿಸಬೇಕು. ಶಿವನ ಮುಡಿಯಿಂದ ಎಲ್ಲರ ದಾಹ ತಣಿಸುವ ಗಂಗೆ ಭೂಮಿಗೆ ಇಳಿದು ಬಂದ ಶುಭದಿನ ಕೂಡ ಇದೇ ಎಂದು ನಂಬಲಾಗಿದೆ.
ಬದರಿನಾರಾಯಣನ ಮಂದಿರದ ದ್ವಾರವನ್ನು ತೆರೆಯುವುದು ಅಕ್ಷಯ ತೃತೀಯದಂದು. ಅದು ಮುಕ್ತಿದ್ವಾರವನ್ನು ತೆರೆಯುವ ತಿಥಿ ಎಂದು ಪಯರ್ಾಯವಾಗಿ ಹೇಳಬಹುದು. 12ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವಣ್ಣನವರು ಜನಿಸಿದ್ದು ಕೂಡ ಇದೇ ದಿನ. ಅಂದು ಸೂರ್ಯ ಮತ್ತು ಚಂದ್ರರಿಬ್ಬರು ಅವರ ಉಜ್ವಲತೆಯ ಉತ್ತುಂಗದಲ್ಲಿರುತ್ತಾರೆ. ಹಗಲೂ ಪ್ರಖರ, ರಾತ್ರಿಯೂ ತುಂಬ ಬೆಳಕು!
ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆ ಇಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನವಿಲ್ಲದ್ದು. ಇದು ಸಮದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತರತೆಯ ಪ್ರತೀಕ.
ಧರ್ಮವು ಕರ್ತವ್ಯ, ಆಧ್ಯಾತ್ಮಿಕತೆಯನ್ನು ಅರ್ಥವು ಸಂಪತ್ತನ್ನು, ಕಾಮವು ಭೌತಿಕಕ ಸಂತೋಷ. ಆಕಾಂಕ್ಷೆಗಳನ್ನು ಸಂಕೇತಿಸಿದರೆ ಮೋಕ್ಷ ಈ ಭವಬಂಧನದಿಂದ ಮುಕ್ತವಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿ ಯಾವುದಾದರೊಂದರ ಆರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲ ರೀತಿಯಿಂದಲೂ ಅನುಕೂಲಕರವಾದ ಶುಭ ದಿನವೇ ಈ ಅಕ್ಷಯ ತೃತೀಯ.
ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಪೇಜಾವರ ಮಠದ ಪರಂಪರೆಯಲ್ಲಿ ಏಳನೆಯ ಯತಿಗಳಾದ ಶ್ರೀ ವಿಜಯಧ್ವಜ ತೀರ್ಥರು ಶ್ರೀ ಮದ್ಭಾಗವತಕ್ಕೆ ಪದರತ್ನಾವಲೀ ಎಂಬ ಸಮಗ್ರ ಟಿಪ್ಪಣಿಯನ್ನು ಬರೆದ ಜ್ಞಾನಿ ಶ್ರೇಷ್ಠರು. ಅವರು ಆರಾಧನೆಯೂ ದ.ಕ., ಕೇರಳ ಗಡಿಯ ಮಂಜೇಶ್ವರ ಸಮೀಪದ ಕಣ್ವತೀರ್ಥದಲ್ಲಿ ಅಕ್ಷಯ ತದಿಗೆಯಂದು ವಿಜಂಭಣೆಯಿಂದ ನಡೆಯಲಿದೆ.
ಜಗನ್ನಾಥ ಪುರಿಯ ದೇವರ ರಥಕಟ್ಟಲು ಆರಂಭಿಸುವ ದಿನವೂ ಇದಾಗಿದೆ. ಇಂದೇ ಆದಿ ಶಂಕರಾಚಾರ್ಯರು ಕನಕಧಾರಾ ಸ್ತೋತ್ರ ರಚಿಸಿದರು ಎಂದು ನಂಬಿಕೆಯಿದೆ. ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ. ಪ್ರತಿ ಎರಡು ದಿನಕ್ಕೊಮ್ಮೆ ಉಪವಾಸ ವ್ರತಾಚರಣೆ ಮಾಡುವ ಕಟ್ಟಾ ಸಂಪ್ರದಾಯಸ್ಥರು ತಮ್ಮ ಒಂದು ವರ್ಷದ ತಾಪ್ಸಾಯ ವನ್ನು ಅಂದು ಮುಕ್ತಾಯಗೊಳಿಸುತ್ತಾರೆ. ಪುರಾಣದಲ್ಲಿ ಋಷಭದೇವ ಕಬ್ಬಿನ ರಸ ಕುಡಿದು ತನ್ನ ಅಖಂಡ ವ್ರತಕ್ಕೆ ಅಂತ್ಯ ಸಾರಿದನೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಈಗಲೂ ಕಬ್ಬಿನ ರಸ ಕುಡಿದೇ ಉಪವಾಸ ಪರಿಸಮಾಪ್ತಿಗೊಳಿಸುವುದು ಪದ್ಧತಿ.
ದರ್ಶನ, ಸ್ಪರ್ಶನ, ಕೀರ್ತನ, ಸ್ನಾನ ಪಾನಾದಿಗಳ ಮೂಲಕ ಜನ್ಮಾಂತರಗಳ ಪಾಪ, ದೋಷ ತೊಳೆಯುವ ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.
ಗಂಗಾ ಸ್ನಾನಕ್ಕೆ ಮತ್ತು ಭಗವಂತನಿಗೆ ವಿಶೇಷವಾಗಿ ಚಂದನ (ಶ್ರೀಗಂಧ) ಲೇಪನದಿಂದ ಅರ್ಚನೆ ಮಾಡುವುದಕ್ಕೆ ಈ ದಿನವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ. ಶ್ರೀಗಂಧದ ಕೊರಡನ್ನು ಶಿಲೆಯ ಮೇಲೆ ತೇಯುತ್ತಿದ್ದರೆ ಮೇಲುಗಡೆಯಲ್ಲಿನ ಕೊಳಕೆಲ್ಲ ಹೊರಟುಹೋದ ಮೇಲೆ ಬರುವ ಶುಭ್ರತಮವಾದ ಗಂಧವು ಭಗವಂತನ ಪೂಜೆಗೆ ತನ್ನನ್ನು ಅಪರ್ಿಸಿಕೊಳ್ಳಲು ಸಿದ್ಧವಾಗುತ್ತದೆ. ಹಾಗೆಯೇ ಧ್ಯಾನರೂಪವಾದ ಮಥನದಿಂದ ಅಥವಾ ತೇಯುವಿಕೆಯಿಂದ ಮನಸ್ಸಿನ ಮೇಲಿನ ಪದರುಗಳಲ್ಲಿರುವ ದುವರ್ಾಸನೆಗಳು ಮೊದಲು ಕಾಣಿಸಿಕೊಂಡು ತೊಲಗಿ ಹೋದ ನಂತರ ತುಂಬ ಆಳದಲ್ಲಿರುವ ವನಸ್ಪತಿಯಾದ ಪರಮಾತ್ಮನಿಗೆ ಅಪರ್ಿತವಾಗುತ್ತದೆ. ಅದಕ್ಕೆ ಯೋಗಿ ಪುಂಗವರು ಓ ಭಗವಂತ ಮನಸ್ಸೇ ನಾನು ನಿನಗೆ ಪೂಸುವ ಗಂಧ ಎಂದು ಅರಿಕೆ ಮಾಡಿಕೊಳ್ಳುತ್ತಾರೆ.
ವೈಶಾಖ ಮಾಸವು ಸೆಕೆ, ಧಗೆ-ಬಿಸಿಲುಗಳಿಂದ ಬೆವರಿಳಿದು ನಮ್ಮನ್ನು ಬೆಂಡಾಗಿಸುವ ತಾಪಕವಾದ ಮಾಸ. ಇಂದು ಈ ಮಾಸದಲ್ಲಿ ತಂಪೆರೆದಷ್ಟೂ ಸಾಲದು. ಈ ತಂಪು ಕೃತಕ ಕೂಲರ್ಗಳಿಂದ ಆಗದೇ ದೈವಿಕವಾಗಿ ದೇವರುಗಳಿಂದಲೇ ಆದರೆ ಎಷ್ಟು ಚಿನ್ನ! ಆದ್ದರಿಂದ ಪುಣ್ಯವು ತುಷ್ಟಿಯೂ ಪುಷ್ಟಿಯೂ ಆಗುವುದಿಲ್ಲವೇ? ಹೀಗಾಗಿ ದೇವರ ಪ್ರತಿಮೆಗಳಿಗೆ ಗಂಧವನ್ನು ಸಂಪೂರ್ಣವಾಗಿ ಲೇಪಿಸುವುದು ಮರುದಿನ ಆ ಗಂಧವನ್ನು ಮೆಗೆ ಪೂಸಿಕೊಳ್ಳುವುದು ಪರಮ ಪುಣ್ಯಪ್ರದ.
ಮಗದೊಂದು ಗರಿಮೆ ಅಂದರೆ ವಾದೀಂದ್ರರು ಗುರು ಗುಣಸತಿವನವನ್ನು ಈ ದಿನದಂದೇ ಮಂತ್ರಾಲಯ ಗುರು ಸಾರ್ವಭೌಮರಿಗೆ ಭಕ್ತಿ ಭಾವದಿಂದ ಸಮಪರ್ಿಸಿದರೆಂದೂ, ಅವರ ಭಕ್ತಿ ಭಾವಗಳಿಗೆ ಪುಳಕಿತರಾಗಿ ರಾಘವೇಂದ್ರರು ವೃಂದಾವನ ಸಮೇತವೇ ತಲೆದೂಗಿ ವಾದೀಂದ್ರರ ಕೀತರ್ಿಯನ್ನು ಅನೇಕ ತಲೆಮಾರುಗಳ ತನಕ ಹಬ್ಬಿಸಿ ಅನಂತ ಫಲ ನೀಡಿದ್ದು ಅಕ್ಷಯ ತೃತೀಯ ಮಹಿಮೆಯೇ ಆಗಿದೆ. ಹೀಗಾಗಿ ಅಂದು ಗಂಧಲೇಪಿತ ಗುರುರಾಜರ ದರ್ಶನ, ಪರಮ ಮಂಗಳಕರ.
ಇಷ್ಟೇ ಏಕೆ? ಇದರ ಹೆಗ್ಗಳಿಕೆ ಮತ್ತೊಂದು ಹಿನ್ನೆಲೆಯಿದೆ. ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಪಡಿಸಿದ್ದು, ಸದಾ ಪರಿಶುದ್ಧಳ ಪುನಃ ಪರಿಶುದ್ಧತೆ ಸದಾ ಸಂಪಾದಿಸಬೇಕಾದ ಜ್ಞಾನವನ್ನು ಪುನಃ ಸಂಪಾದಿಸುವ, ಜ್ಞಾನಯಜ್ಞದ ಪ್ರತೀಕವೂ ಆಗಿದೆ.
ಇನ್ನು ಬೇಸಿಗೆ ಕಾಲದಲ್ಲಿ ತಣ್ಣೀರನ್ನು ದಾನ ಮಾಡುವುದರಿಂದ ಅಕ್ಷಯ ಪುಣ್ಯ. ಪ್ರಾಣಾಪಾನಗಳ ಪೂರ್ಣ ಸ್ತಂಭನ ರೂಪವಾದ ಕುಂಭಕ ಯೋಗದ ನಿಶ್ಚಲತೆಯನ್ನು ಅದು ಸ್ಮತಿಗೆ ತರುತ್ತದೆ. ಅಂತಹ ಜಲವನ್ನು ಹೊತ್ತಿರುವ ಕಲಶವು ತಳದಲ್ಲಿ ಚಿಕ್ಕದಾಗಿದ್ದು ಮಧ್ಯದಲ್ಲಿ ವಿಸ್ತಾರವಾಗಿದ್ದು, ಮತ್ತೆ ಮುಖದಲ್ಲಿ ಕಿರಿದಾಗಿ ಸೃಷ್ಟಿ ಸ್ಥಿತಿ ಲಯಗಳನ್ನು ಹೊಂದುವ ವಿಶ್ವವನ್ನು, ಅವುಗಳನ್ನು ನಿರ್ವಹಿಸುವ ಭಗವಂತನ ತ್ರಿಮೂತರ್ಿ ತತ್ವವನ್ನು ಹೇಳುತ್ತದೆ. ಕಲಶಪೂಜೆಯ ಮಂತ್ರದಲ್ಲಿ ಈ ಅರ್ಥವನ್ನು ಕಾಣುತ್ತೇವೆ. ಹೀಗೆ ಅಕ್ಷಯ ತೃತೀಯ ಪರ್ವದ ಕಾಲಜ್ಞಾನ, ದ್ರವ್ಯಜ್ಞಾನ, ವಿಧಿಜ್ಞಾನ ಪೂರ್ವಕವಾಗಿ ಈ ಹಬ್ಬವನ್ನು ಆಚರಿಸಿದರೆ ಅದರ ಹೆಸರಿಗೆ ಅನ್ವರ್ಥವಾದ ಅಕ್ಷಯ ಫಲವು ನಿಶ್ಚಿತವಾಗಿ ಸಿದ್ಧಿಸುವುದು.
ಕೆಲವು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ನಾಲ್ಕು ದಿಕ್ಕಿಗೆ ನಾಲ್ಕು ನಾಣ್ಯಗಳನ್ನು ಎಸೆಯುತ್ತಾರೆ. ಹೀಗೆ ಮಾಡಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನಲಾಗುತ್ತದೆ. ಮದುವೆಯಾದ ಮಹಿಳೆಯರು ಸಿಂಧೂರದಲ್ಲಿ ಅದ್ದಿದ ಕೆಂಪು ದಾರ ಧರಿಸಿ, ಶಿವ ಮಂದಿರಕ್ಕೆ ಭೇಟಿ ನೀಡಿ ಪತಿಯ ದೀಘರ್ಾಯುಷ್ಯಕ್ಕಾಗಿ ಮತ್ತು ಮದುವೆಯಾಗದವರು ಅದನ್ನು ಶಿವನ ಪಾದದ ಮೇಲಿಟ್ಟು ತಾವು ಬಯಸಿದಂಥ ಪತಿಯನ್ನು ಕರುಣಿಸಲು ಬೇಡಿಕೊಳ್ಳುತ್ತಾರೆ.
ಇನ್ನೊಂದು ವೈಶಿಷ್ಟವೆಂದರೆ ಶ್ರೀಕೃಷ್ಣನ ಅಣ್ಣನಾದ ಬಲರಾಮ ಜನನ, ಅಂದು ಹಲವೆಡೆ ಬಲರಾಮನ ಆಯುಧವಾದ ನೇಗಿಲನ್ನು ಪೂಜಿಸುವ ರೈತರು ಆ ದಿನ ಬೆಳಿಗ್ಗೆ ಗದ್ದೆಗಳಿಗೆ ಹೊರಡುವಾಗ ಪ್ರಾಣಿ - ಪಕ್ಷಿಗಳು ಕಂಡರೆ ಈ ಬಾರಿ ಉತ್ತಮ ಬೆಳೆ, ಮಳೆ ಸಂಕೇತ ಎಂದು ಸಂಭ್ರಮಿಸುತ್ತಾರೆ.
ಆಪ್ತ ಸಖನಿಗೆ ಆತ್ಮ ಸಖನ ಸ್ಥಾನ ಕೊಟ್ಟು, ಅತಿಥಿ ಸತ್ಕಾರದ ಕೀತರ್ಿಯನ್ನು ಚಿರಸ್ಥಾಯಿಯಾಗಿಸಿದ ಶ್ರೀಕೃಷ್ಣ ಕುಚೇಲನನ್ನು ಸತ್ಕರಿಸಿದ ಶ್ರೇಷ್ಠ ದಿನವೇ ಅಕ್ಷಯತದಿಗೆ.ಹಾಗೆಯೇ ಶ್ರೀಕೃಷ್ಣ ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯತದಿಗೆ.
ಅಕ್ಷಯತದಿಗೆಯಂದು ಮಾಡಬಹುದಾದ ಪುಣ್ಯ ಕಾರ್ಯಗಳು ಅನ್ನದಾನ, ಹಸಿರು ಹುಲ್ಲುಗಳಿಂದ, ಮೇವಿನಿಂದ ಹಸುಗಳನ್ನು ತಪ್ತಿಪಡಿಸುವುದು, ಅವಶ್ಯವಿರುವ ಮಗುವಿನ ವಿದ್ಯಾಭ್ಯಾಸದ ಖಚರ್ು-ವೆಚ್ಚ ನೀಡುವುದು, ದುಶ್ಚಟಗಳನ್ನು ತ್ಯಜಿಸುವುದು, ಲೌಕಿಕ ಪಾರಮಾಥರ್ಿಕ ಸಾಧನೆಯ ಆರಂಭ.
ಕಾಲ ಕಾಮ ಪರಶುರಾಮ
ಮಹಾ ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ದೈಹಿಕ ಮತ್ತು ಬೌದ್ಧಿಕತೆಯ ದೃಷ್ಟಿಯಿಂದಲೂ ಪರಿಪೂರ್ಣ ಅವತಾರ. ಅದು ಆದದ್ದು ಇದೇ ಅಕ್ಷಯ ತೃತೀಯದಂದು. ಜಮದಗ್ನಿ-ರೇಣುಕೆಯ ಮಗನಾಗಿ ಜನನ. ದೈವೀ ಸ್ವರೂಪ ಮತ್ತು ಪವಾಡಗಳ ಹೊರತಾಗಿ ಶ್ರೀ ಪರಶುರಾಮನ ವ್ಯಕ್ತಿತ್ವವನ್ನು ಅವಲೋಕಿಸಿದಾಗ ಆತ ಒಬ್ಬ ಮಹಾನ್ ನಾಯಕ. ಆದರ್ಶ ಗುರು. ತ್ರೇತಾಯುಗದಲ್ಲೂ ಯುಗ ಧರ್ಮವನ್ನು ಮೀರಿ ಅತ್ಯಾಚಾರ-ಅನಾಚಾರ-ಭ್ರಷ್ಟಾಚಾರವೆಂಬ ಸಹಸ್ರಬಾಹುಗಳ ಕಾರ್ತವೀರ್ಯನ ರೂಪದಲ್ಲಿ ಪ್ರಕಟವಾದಾಗ ಕೊಡಲಿಯೆತ್ತಿ ಸಮರ ಸಾರಿ ಜಯಶೀಲರಾದ ಗಂಡುಗಲಿ.
ತಂದೆಯ ಮಾತನ್ನು ನಡೆಸಿಕೊಡುವಲ್ಲಿ ಕಾಣುವ ಅಸಾಧಾರಣ ಪಿತೃಭಕ್ತಿ. ಮೃತಳಾದ ತಾಯಿ, ತಮ್ಮಂದಿರನ್ನು ಬದುಕಿಸಲು ವರವನ್ನು ಬೇಡುವಲ್ಲಿ ಕಂಡು ಬರುವ ಅನನ್ಯ ಅಸಾಧಾರಣ ಮಾತೃಭಕ್ತಿ. 21 ಸಾರಿ ಭೂ ಪ್ರದಕ್ಷಿಣೆ ಮಾಡಿ ಕ್ಷತ್ರಿಯ ಸಂಹಾರದಿಂದ ಗಳಿಸಿದ ಭೂಮಿಯನ್ನು ತಾನು ಅನುಭವಿಸದೇ ಸ್ವಜನರಿಗೆ ದಾನವಿತ್ತ ಉದಾರತೆ, ಕೊಡಲಿಯೆಸೆದು ಸಮುದ್ರ ರಾಜನಿಂದ ಪಡೆದ ಭೂಮಿಯಲ್ಲಿ ತೋರಿದ ಹೊಸ ಸೃಷ್ಟಿಯ ಸಾಮಥ್ರ್ಯ. ಅನಂತರ ಲೋಕ ಕಲ್ಯಾಣಾರ್ಥವಾಗಿ ಮಹೇಂದ್ರ ಪರ್ವತದಲ್ಲಿ ತಪಸ್ಸಾಚರಣೆ ಹಾಗಾಗಿ ಚಿರಂಜೀವಿ. ಭವಿಷ್ಯ ಪುರಾಣದಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ಇವರ ಅಸಾಧಾರಣ ಮಹಿಮೆಯನ್ನು ವಣರ್ಿಸಿರುವುದಾಗಿ ಉಲ್ಲೇಖವಿದೆ.
ನಮ್ಮ ಕನರ್ಾಟಕಕ್ಕೂ ಪರಶುರಾಮನಿಗೂ ನಿಕಟ ಸಂಬಂಧವಿದೆ. ಕನ್ನಡ ನಾಡಿನ ಒಂದು ದೊಡ್ಡ ಭಾಗವನ್ನು ಪರಶುರಾಮ ಕ್ಷೇತ್ರ ಎನ್ನುತ್ತೇವೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ಶ್ರೀರಾಮ ಪರಶುರಾಮ ಸಂಧಿಸಿದ ಸ್ಥಳ ಭಾರ್ಗವ ಪುರಿ. ಮಹಾಭಾರತದ ವೀರಯೋಧ ಕರ್ಣ ತನ್ನ ಸ್ವಯಂಕೃತ ಅಪರಾಧದಿಂದ ಪರಶುರಾಮರಿಂದ ಶಾಪಗ್ರಸ್ತನಾದ. ಹಾಗಾಗದೇ ಇದ್ದಲ್ಲಿ ಮಹಾಭಾರತದ ಕಥೆಯೇ ಬೇರೆಯಾಗುತ್ತಿತ್ತೇನೋ ಪರಶುರಾಮನನ್ನು ಕಾಲಕಾಮನೆಂದೂ ಕರೆಯಲಾಗುತ್ತದೆ. ಸೃಷ್ಟಿ-ಸ್ಥಿತಿ-ಲಯಗಳೆಂಬ ತ್ರಿವಿಧ ವ್ಯಾಪಾರಕ್ಕೆ ಕಾಲ ಮತ್ತು ಕಾಮಗಳು ಪ್ರೇರಕ. ಕಾಲವೆಂಬುದು ಶಿವ ಸ್ವರೂಪ ಮತ್ತು ಕಾಮವೆಂಬುದು ವಿಷ್ಣು ಸ್ವರೂಪವೆಂದಾದಲ್ಲಿ ಕಾಲಕಾಮ (ಪರಶುರಾಮ) ಶೈವ-ವೆಷ್ಣವ ಪಂಥಗಳಿಬ್ಬರಿಗೂ ಮಾನ್ಯ.
ಬಂಗಾರದೊಂದಿಗೆ ಬೆಳೆದ ಭಾರತೀಯರು
ಭಾರತ ದೇವಶ ಸ್ವರ್ಣಭೂಮಿ. ಒಡಲಾಳದಲ್ಲಿ ಇತರ ಅಮೂಲ್ಯ ಲೋಹಗಳಿರುವ ಹಾಗೆಯೇ ಪ್ರಪಂಚದೆಲ್ಲೆಡೆ ಆಥರ್ಿಕ ಮಾನದಂಡವಾಗಿರುವ ಚಿನ್ನವೂ ಇದೆ. ಭಾರತೀಯರ ಬದುಕು ಬಂಗಾರದೊಂದಿಗೇ ಬೆಳೆದಿದೆ ಎಂದರೆ ಅತಿಶಯವಲ್ಲ.
ವೈಶಾಖ ಮಾಸಕ್ಕೆ ಸೂರ್ಯ ಅಭಿಮಾನಿ ದೇವತೆ. ಸೂರ್ಯನು ಬೆಳಕು ಮತ್ತು ಶಕ್ತಿಯ ಉಗಮ ಸ್ಥಾನ. ಸೂರ್ಯ ಜಗದ ಕಣ್ಣು. ಸೂರ್ಯ ಜಗವನ್ನು ಬೆಳಗುವವನು. ಅವನ ಆಂತರ್ಯದಲ್ಲಿರುವುದೇ ಪ್ರಬಲವಾದ ಅಗ್ನಿಯ ಮೊದಲ ಮಗನೇ ಹಿರಣ್ಯ (ಬಂಗಾರ). ಸೂರ್ಯ-ಅಗ್ನಿ-ಬಂಗಾರದ ಸಂಬಂಧ ಹೀಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ವೈಶ್ವಾನರಾಗ್ನಿಯ ರೂಪದಲ್ಲಿ ನಾನು ಎಲ್ಲರ ಹೃದಯದಲ್ಲಿರುತ್ತೇನೆ ಎಂದು ವಿಸ್ತರಿಸಿ ಅಥರ್ೈಸುವುದಾದರೆ ನಾವು ಬಂಗಾರವನ್ನು ಧರಿಸಿಕೊಂಡಾಗ ನಮ್ಮ ಹೃದಯವಾಸಿಯಾದ ಅಗ್ನಿಯನ್ನು ಅವನ ಮಗ ಹಿರಣ್ಯ (ಬಂಗಾರ)ನಿಂದಲೇ ಅಲಂಕರಿಸದಂತಾಗುವುದು.
ವಿಷ್ಣು ಅಲಂಕಾರ ಪ್ರಿಯ. ಆತನಿಗೆ ಪ್ರಿಯವಾದ ಹೇಮ (ಚಿನ್ನ) ರಜತಾದಿ ಒಡವೆಗಳನ್ನು ಖರೀದಿಸಿ ಅಪರ್ಿಸಿ ಕೃತಾರ್ಥರಾಗುವರು ಭಾರತೀಯ ಆಸ್ತಿಕರು. ವಿಷ್ಣು ಸಹಸ್ರನಾಮದಲ್ಲಿ ಹೇಳಿದಂತೆ ವಿಷ್ಣು ಸುವರ್ಣ ವರ್ಣದವನು. ಮಾತ್ರವಲ್ಲ, ಅಷ್ಟೆಶ್ವರ್ಯಗಳ ಅಧಿಪತಿ ಕುಬೇರ. ಈ ಒಂದು ದಿನ ಸ್ವತಃ ಐಶ್ವರ್ಯ ದೇವತೆ ಲಕ್ಷ್ಮಿಯನ್ನು ಪೂಜಿಸುತ್ತಾನೆ ಎಂದು ಲಕ್ಷ್ಮೀತಂತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ದೈವಭಕ್ತರಿಗೆ ಇದೊಂದೇ ದಿನ ಕುಬೇರ ಲಕ್ಷ್ಮೀ ಪೂಜೆ ಮಾಡಲು ಅವಕಾಶ. ವಿಶೇಷವಾಗಿ ತುಪ್ಪದ ದೀಪ ಹಚ್ಚಿ ಪೂಜಿಸಲಾಗುತ್ತದೆ.
ಭೂಮಿಯನ್ನು ವಸುಂಧರೆ ಎಂದೇ ಕರೆದಿದ್ದಾರೆ ಭಾರತೀಯರು. ಭಾರತೀಯರಿಗೆ ಭೂಮಿ ಸ್ತ್ರೀರೂಪಿ, ದೇವಿ-ಸಮಾನ, ದೇವಿಯನ್ನು ನಿರಾಭರಣ ಸುಂದರಿಯಾಗಿ ಕಲ್ಪಿಸಿಕೊಳ್ಳಲಾದೀತೆ? ಕಿವಿಗೆ ಓಲೆ, ಮೂಗಿಗೆ ಮೂಗುತಿ, ಕೊರಳಿಗೆ ಸರ, ಹಾರ, ತೋಳಿಗೆ ತೋಳಬಂದಿ, ಸೊಂಟಕ್ಕೆ ಸೊಂಟಪಟ್ಟಿ ಒಡ್ಯಾಣ... ಕಲಿಗೆ ಕಾಲ್ಬೈನು, ವಿವಾಹಿತರಿಗೆ ಕರಿಮಣಿ ಸರ, ಕಾಲುಂಗುರ... ಹೀಗೆ ಅಡಿಯಿಂದ ಮುಡಿಯವರೆಗೆ ಚಿನ್ನವೇ ಚಿನ್ನ; ಬಂಗಾರದೊಡವೆಗಳದೇ ಸಾಮ್ರಾಜ್ಯ. ಸ್ತ್ರೀಯರ ಸೌಂದರ್ಯ ಇಮ್ಮಡಿಸುವುದೇ ಚಿನ್ನಾಭಾರಣಗಳಲ್ಲಿ ಎಂಬುದು ಭಾರತೀಯರ ಮನಸ್ಸು ಹೇಳುವ ವಿಚಾರ.
ಮನೆ ನಿಮರ್ಾಣದ ಪ್ರಾರಂಭದಲ್ಲಿ ಭೂಮಿಯನ್ನು ಪೂಜಿಸಿ, ಭೂಗರ್ಭಕ್ಕೆ ಮನೆಯ ಪಂಚಾಂಗದಡಿಯಲ್ಲಿ ಚಿನ್ನ ನವರತ್ನಗಳನ್ನು ನಿಕ್ಷೇಪಿಸುತ್ತಾರೆ. ಭಾರತೀಯರು, ಮರಿಮಗನ ಜನನವಾದಾಗ ಬಂಗಾರದ ಹಣತೆಯಲ್ಲಿ ಚಿನ್ನದ ಸರಿಗೆ ಬತ್ತಿ ಇಟ್ಟು ದೀಪ ಬೆಳಗಿಸಿ ಮಗುವಿನ ಮುಖವನ್ನು ನೋಡುವ ಪದ್ಧತಿ ಇದೆ. ಅಜ್ಜ ಅಜ್ಜಿಗೆ ಕನಕಾಭಿಷೇಕ ಮಾಡಿಸುತ್ತಾರೆ. ಅಜ್ಜ ಅಜ್ಜಿಯರು ಮರಣಶಯ್ಯೆಯಲ್ಲಿ ಕೊನೆಯುಸಿರು ಎಳೆಯುವ ಮುನ್ನ ಬಾಯಿಗೆ ಹಾಕಲು ಸಾಲಿಗ್ರಾಮದ ನೀರು, ಗಂಗಾಜಲ ಮತ್ತು ಚಿನ್ನವನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಹಿಂದೆಲ್ಲ ರಾಜರಿಗೆಲ್ಲ ಸುವರ್ಣ ಜಲದ ಅಭಿಷೇಕ ಮಾಡುವಂತೆ ಇವತ್ತು ಪೀಠಾರೋಹಣಗೆಯ್ಯುವ ಮಠಗಳ ಯತಿಗಳಿಗೆ ಸುವರ್ಣ ಅಭಿಷೇಕ ಮಾಡುವ ಪರಂಪರೆ ಮುಂದುವರಿದುಕೊಂಡು ಬಂದಿದೆ. ಹಿಂದೂ ಧಾಮರ್ಿಕ ವಿಧಿ ವಿಧಾನಗಳಲ್ಲಿ ಉಂಗುರದ ಬೆರಳಿನಲ್ಲಿ ದಭರ್ೆಯಿಂದ ಮಾಡಿದ ಪವಿತ್ರವನ್ನು ಧರಿಸುತ್ತಾರೆ. ಈ ಪವಿತ್ರವನ್ನು ದನದ ಬಾಲದ ರೋಮ, ಮಸೆಹುಲ್ಲು, ಚಿನ್ನದ ಸರಿಗೆಯಿಂದ ಮಾಡುತ್ತಾರೆ. ಇವುಗಳ ಪೈಕಿ ಚಿನ್ನದ ಸರಿಗೆಯಿಂದ ಮಾಡಿದ ಪವಿತ್ರವೇ ಅತ್ಯಂತ ಶ್ರೇಷ್ಠ ಸುವರ್ಣಸ್ಯ ಪವಿತ್ರಸ್ಯ ಕಲಾಂನಾರ್ಹಂತಿ ಷೋಡಶೀಮ್ ಎಂಬಂತೆ ಚಿನ್ನದ ಸರಿಗೆಯ ಪವಿತ್ರಕ್ಕೆ ಇತರ ಪವಿತ್ರಗಳಿಗಿಂತ ಹದಿನಾರು ಪಟ್ಟು ಪಾವಿತ್ರ ಇದೆ ಎಂದು ಹೇಳುತ್ತಾರೆ. ದಭರ್ೆಯ ಪವಿತ್ರವನ್ನು ಪಾದ ತೊಳೆಯುವಾಗ, ಗಂಧ ನೀಡುವಾಗ, ಭೋಜನ ಮಾಡುವಾಗ, ಹಾಗೆ ಅನೇಕ ಸಂದರ್ಭಗಳಲ್ಲಿ ಬಳಸಲಾಗದು. ಅದರೆ ಚಿನ್ನದ ಪವಿತ್ರ ಧಾರಣೆಗೆ ಈ ನಿಷೇಧವಿಲ್ಲ.
ಭಾರತೀಯ ಸನಾತನ ಧರ್ಮ ಪರಂಪರೆಯಲ್ಲಿ ವ್ಯಕ್ತಿಯ ಮೃಣ್ಮಯ ಬದುಕನ್ನು ಚಿನ್ಮಯಗೊಳಿಸುವ ಆಶಯವಿದೆ. ನಿತ್ಯ ನೈಮಿತ್ತಿಕ ಕರ್ಮಗಳೊಂದಿಗೆ ದೋಷಗಳನ್ನು ದೂರ ಮಾಡಿ, ಗುಣಗಳನ್ನು ತುಂಬಲು ಷೋಡಶ ಸಂಸ್ಕಾರಗಳನ್ನು ಈ ಕಾರಣಕ್ಕಾಗಿ ನಡೆಸಲಾಗುತ್ತಿದೆ. ಜನನದಿಂದ ತೊಡಗಿ ಮರಣದ ತನಕ ದೇಹ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳನ್ನು ಶುದ್ಧಿಗೊಳಿಸಿ ಆತ್ಮನನ್ನು ತಿಳಿದುಕೊಳ್ಳಲು ಈ ಸಂಸ್ಕಾರಗಳು ಅಗತ್ಯ ಎಂದು ಹೇಳಲಾಗಿದೆ. ಈ ಎಲ್ಲ ಸಂಸ್ಕಾರಗಳ ಸಂದರ್ಭದಲ್ಲಿ ಚಿನ್ನವನ್ನು ಒಂದಿಲ್ಲೊಂದು ರೂಪದಲ್ಲಿ ಬಳಕೆ ಮಾಡುತ್ತಾರೆ.
ಮಗು ಜನಿಸಿದ ದಿನ ಅಥವಾ ಹನ್ನೊಂದನೆಯ ದಿನ ಜಾತಕ ಕರ್ಮ ಮಾಡುವ ಕ್ರಮ ಇದೆ. ಗರ್ಭದ ನೀರು ಕುಡಿತ ತಾಪ ನಿವೃತ್ತಿಗೆ, ಭಗವಂತನ ಕೃಪೆಗೆ ಜಾತಕಕರ್ಮ ಮಾಡುತ್ತಾರೆ. ಜೇನು ಮತ್ತು ತುಪ್ಪ ಇವುಗಳನ್ನು ಸಮವಾಗಿ ಬೆರೆಸಿ ಚಿನ್ನದಿಂದ ತೇದು ಪಥ್ಯಾಯ (ಹಿತಕ್ಕಾಗಿ) ಬಲಾಯ (ಬಲಕ್ಕಾಗಿ), ಅಮೃತಾಯ (ಅಮೃತತ್ವಕ್ಕಾಗಿ) ಎಂದು ಮಂತ್ರ ಪೂರ್ವಕವಾಗಿ ಮಗುವಿಗೆ ಮೂರು ಬಾರಿ ನೆಕ್ಕಿಸುತ್ತಾರೆ. ತೇಯಲು ಬಳಸಿದ ಚಿನ್ನವನ್ನು ತೊಳೆದು ಮಗುವಿನ ಬಲಕಿವಿಗೆ ಮುಟ್ಟಿಸುತ್ತಾರೆ. ಈ ಕ್ರಿಯೆಯಿಂದ ಮಗುವಿನ ಆಯುಷ್ಯ, ಮೇಧಾಶಕ್ತಿ ವೃದ್ಧಿಸುವುದೆಂದು ಹೇಳಲಾಗಿದೆ.
ಅನ್ನಪ್ರಾಶನ ಸಂಸ್ಕಾರದಲ್ಲೂ ಚಿನ್ನದ ಬಳಕೆ ಇದೆ. ಚಿನ್ನದ ಪಾತ್ರೆಯಲ್ಲಿ ಅನ್ನವನ್ನು ತೆಗೆದುಕೊಂಡು ಅದಕ್ಕೆ ಮೊಸರು, ಜೇನು, ತುಪ್ಪ, ಹಾಲು ಹಾಕಿ ಕಲಸಿ ಮಗುವಿಗೆ ಉಣಿಸುತ್ತಾರೆ. ಇದರಿಂದ ಮಗುವಿನ ದೇಹ ಶುದ್ಧಿಯಾಗಿ ಬ್ರಹ್ಮವರ್ಚಸ್ಸು ಇಂದ್ರಿಯಗಳ ಶಕ್ತಿ, ಆಯುಷ್ಯ ವಧರ್ಿಸುವುದು, ಕರ್ಣವೇದ (ಕಿವಿ ಚುಚ್ಚುವುದು) ಸಂಸ್ಕಾರದಲ್ಲಿ ಮಕ್ಕಳ ಕಿವಿಗಳನ್ನು ಚುಚ್ಚಿ ಚಿನ್ನದ ಸರಿಗೆ ಅಥವಾ ಆಭರಣ ತೊಡಿಸುತ್ತಾರೆ. ಈ ಕ್ರಿಯೆಯಿಂದ ಮಗುವಿನ ಮೇಧಾಶಕ್ತಿ ಹೆಚ್ಚುವುದು ಎಂದು ಸಂಶೋಧನೆಗಳಿಂದ ತಿಳಿದು ಬರುತ್ತದೆ.
ವಿವಾಹ ಸಂಸ್ಕಾರದಲ್ಲಂತೂ ಚಿನ್ನಕ್ಕೆ ಭಾರೀ ಪ್ರಾಶಸ್ತ್ಯ. ವಿವಾಹ ಸಂಸ್ಕಾರ ಪೂರ್ವದಲ್ಲಿ ಮಾಡುವ ಸಮಾವರ್ತನದಲ್ಲಿ ವರನ ಕಿವಿಗಳಿಗೆ ಚಕ್ರಾಕಾರದ ಆಭರಣ ಕೊರಳಿಗೆ ಸುವರ್ಣ ಮಣಿಗಳ ಸರ ತೊಡಿಸಿ ಆಯುಷ್ಯ, ವರ್ಚಸ್ಸು ಸಂಪತ್ತಿನ ವೃದ್ಧಿಗಾಗಿ ವೇದೋಕ್ತ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ಕಾಶೀಯಾತ್ರೆಯ ಪ್ರಕ್ರಿಯೆ ನಡೆಯುವುದು. ಚಿನ್ನದ ಆಭರಣಗಳನ್ನು ತೊಡುವುದರಿಂದ ಮುಪ್ಪು ಹಾಗೂ ಭೂತ ಪ್ರೇತಾದಿಗಳ ಬಾಧೆ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ.
ಮರಣದಲ್ಲೂ ಅಷ್ಟೇ... ಊಧ್ರ್ವ ದೈಹಿಕ ಸಂಸ್ಕಾರಗಳಲ್ಲಿ 12ನೇ ದಿನ ಕೊಡುವ ದಶ ದಾನಗಳಲ್ಲಿ ಗೋವು, ಭೂಮಿ, ಎಳ್ಳು, ಚಿನ್ನ, ತುಪ್ಪ, ವಸ್ತ್ರ, ಧಾನ್ಯ, ಬೆಲ್ಲ, ಬೆಳ್ಳಇ ಹಾಗೂ ಲವಣಗಳು ಸೇರಿರುತ್ತವೆ. ಇವುಗಳಲ್ಲಿ ಚಿನ್ನವು ಸರ್ವ ಪಾಪಗಳನ್ನು ಪರಿಹರಿಸಿ ಶುಭ ಫಲವನ್ನು ನೀಡುತ್ತದೆ ಎಂದು ಹೇಳುತ್ತಾರೆ.
ಎಲ್ಲೆಲ್ಲೂ ಬಂಗಾರವೇ... ಎಲ್ಲೆಲ್ಲೂ ಸೌಂದರ್ಯವೇ...!
ಅಕ್ಷಯ ತೃತೀಯಾ ಸಮೀಪಿಸುತ್ತಿದ್ದಂತೆ ಚಿನ್ನಾಭರಣಗಳನ್ನು ಮಾಡಿಸಿಟ್ಟು ಆ ದಿನವೇ ಅಧಿಕಾರಗಳನ್ನು ಪಡೆದುಕೊಳ್ಳುವವರಿದ್ದಾರೆ. ಚಿನ್ನಕ್ಕೆ ಚಿನ್ನವೇ ಸಾಟಿ. ಚಿನ್ನಾಭರಣಗಳಿಗೆ ಮನಸೋಲದವರು ಯಾರು? ವಜ್ರದ ವೈಭವಕ್ಕೆ ತಲೆದೂಗದವರು ಯಾರು? ಮುತ್ತುರತ್ನಗಳ ಅದ್ಭುತ ವಿನ್ಯಾಸಗಳಿಗೆ ಮಾರು ಹೋಗದವರು ಯಾರು? ಪ್ಲಾಟಿನಂ ಆಭರಣಗಳ ಘನತೆಗೆ ಮನ್ನಣೆ ನೀಡದವರು ಯಾರು?
ಚಿನ್ನವೆಂಬ ಹಳದಿ ಲೋಹ ಮನುಕುಲಕ್ಕೆ ದೊರೆತ ದಿನದಿಂದಲೇ ಅದು ಮಾನವನ ಅಚ್ಚುಮೆಚ್ಚಿನ ವಸ್ತುವಾಗಿಬಿಟ್ಟಿತು. ಅದಕ್ಕೆ ಬಗೆ ಬಗೆಯ ರೂಪ ನೀಡಿ, ಅದು ಆಭರಣವಾಗಿ ಚಿನ್ನ ಮಹಿಳೆಯರ ಉಸಿರು ಎಂಬಷ್ಟೇ ಅನಿವಾರ್ಯವಾಯಿತು. ಅಪ್ಪಟ ಗುಣಗಳುಳ್ಳವರಿಗೆ ಚಿನ್ನದ ಹೋಲಿಕೆಯನ್ನು ನೀಡುವ ಪರಂಪರೆಯೂ ಆರಂಭವಾಯಿತು! ಉದಾ: ಚಿನ್ನದಂತಹ ವ್ಯಕ್ತಿತ್ವ, ಚಿನ್ನದಂತಹ ಮನಸ್ಸು ಇತ್ಯಾದಿ.
ರಾಜ ಮಹಾರಾಜರುಗಳ ಕಾಲದಲ್ಲಿ ಚಿನ್ನದ ನಾಣ್ಯಗಳೇ ಚಲಾವಣೆಯಲ್ಲಿದ್ದವನು. ಈಗ ದೇವಸ್ಥಾನಗಳಿಗೆ ಚಿನ್ನದ ಆಭರಣ, ಕಿರೀಟ ಇತ್ಯಾದಿಗಳ ಜೊತೆಗೆ ಚಿನ್ನದ ರಥವನ್ನು ಕೂಡ ನಿಮರ್ಿಸಲಾಗುತ್ತಿದೆ. ಇದು ನಿಜ ಅರ್ಥದ ಸುವರ್ಣಯುಗ.
ಅಕ್ಷಯ ತೃತೀಯ ಬಂತೆಂದರೆ ಸಾಕು ಬಂಗಾರದ ಅಂಗಡಿಗಳಲ್ಲಿ ಗಡಿಬಿಡಿ ಆರಂಭವಾಗುತ್ತದೆ. ತಿಂಗಳಿಗೂ ಮೊದಲೇ ಬುಕಿಂಗ್, ವಿಶೇಷ ರಿಯಾಯಿತಿ ದರದ ಮಾರಾಟ, ತರಾವರಿ ವಿನ್ಯಾಸಗಳ ಪರಿಚಯ, ಒಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಹರಸಾಹಸ, ಚಿನ್ನಕ್ಕೆ ಅಷ್ಟೊಂದು ಮಹತ್ವ.
ಅಕ್ಷಯತದಿಗೆಯೂ ಬಂಗಾರ ಖರೀದಿಯೂ...
ಯುಗಾದಿ ಬೇವು ಬೆಲ್ಲದ ಸವಿ ಆರುವ ಮುನ್ನ ಭುವಿಯು ಬೆಂದು ಬಾಯ್ದೆರೆದು ಮಳೆಗಾಗಿ ಕಾತರಿಸುವ ಸಮಯ. ಹಸುರುಡುಗೆಗಾಗಿ ಇಳೆ ಎದುರುನೋಡುವ ಸಮಯ. ಅದೇ ಸಮಯದಲ್ಲಿ ಮನೆಯಲ್ಲಿ ಅಮ್ಮನ ಗೋಣಗು, ಈ ಸಲದ ತದಿಗೆಗೆ ಒಂದು ಮೂಗು ಬೊಟ್ಟು ಆದರೂ ಕೊಳ್ಳಲಾಗುವುದೋ ಇಲ್ಲವೋ?
ಆಭರಣಗಳ ಭಂಡಾರವೇ ಮನೆಯಲ್ಲಿದ್ದರೂ ಅಂದು ಕೊಳ್ಳುವುದೊಂದು ರೂಢಿ. ಸಾಸಿವೆ ಡಬ್ಬದ ಉಳಿತಾಯದ ಹಣ ಅಪ್ಪನ ಕಣ್ತಪ್ಪಿಸಿ ಎತ್ತಿಟ್ಟ ಕಾಂಚಾಣ. ನಗುನಗುತ್ತಲೇ ಹಳದಿ ಲೋಹಕ್ಕಾಗಿ ಪುಡಿಗಾಸನ್ನು ಬರಿದು ಮಾಡುವ ದಿನ. ಅದು ಅಕ್ಷಯ ತದಿಗೆ, ಎಂದೂ ಕರಗದ ತನ್ನ ಇಡುಗಂಟನ್ನು ಆಭರಣದಂಗಡಿಗೆ ದಾಂಗುಡಿ ಇಟ್ಟು ಇಡಿ ಇಡಿಯಾಗಿ ಕರಗಿಸುವ ದಿನ.
ಸಂಪತ್ತಿನ ಸಂಚಯವೆಂದರೆ ಕೇವಲ ಕೂಡಿಸುವುದಿಲ್ಲ. ಕಾಪಾಡುವುದಲ್ಲ, ಬದುಕಿನ ಸಂಭ್ರಮವನ್ನು ಅಭಿವ್ಯಕ್ತಗೊಳಿಸಲು, ಮುಂದಿನ ದಿನಗಳಿಗೆ ಒಳ್ಳೆಯ ನೆಲೆಯನ್ನು ಒದಗಿಸಲು ಆಪತ್ಕಾಲಕ್ಕೆ ಒದಗಿಬರಲು ಸಂಪತ್ತನ್ನು ಕೂಡಿಸುವುದು ಜಾಣತನ. ಅಕ್ಷಯ ತೃತೀಯ ಅದಕ್ಕೊಂದು ಶುಭ ಸಂದರ್ಭ. ಅಕ್ಷಯ ತೃತೀಯ-ಅಕ್ಷಯ ಭಾಗ್ಯ. ಅನನ್ಯ ಶುಭ, ಅಗಣಿತ ಪುಣ್ಯ. ಆಗಮ್ಯ ಶ್ರೇಯಸ್ಸು ಸಿದ್ದಿಸಲು ವಿಶೇಷ ಸಂದರ್ಭ.
ಅಕ್ಷಯತದಿಗೆಯ ಪ್ರಮುಖ ಕಾರ್ಯ ಚಿನ್ನದ ಖರೀದಿ. ಅಂದು ಎಲ್ಲಾ ಆಭರಣದಂಗಡಿಗಳೂ ಗೋಲ್ಡ್ ರಷ್ ಡೇ ಆಗಿರುತ್ತದೆ. ಬಂಗಾರದ ಬಗ್ಗೆ ನಮಗೆ ಇಷ್ಟೊಂದು ಆಕರ್ಷಣೆ ಯಾಕೆ? ಶುದ್ಧ ಮನಸ್ಸು, ಶುದ್ಧಾತ್ಮರಿಗೆ ಅಪ್ಪಟ ಬಂಗಾರ ಎನ್ನುತ್ತಾರೆ. ಚಿನ್ನ ಪವಿತ್ರತೆಯ ಸಂಕೇತ, ಶುದ್ಧತೆಯ ಚಿಹ್ನೆ ಸಮದ್ಧಿಯ ದ್ಯೋತಕವೂ ಹೌದು. ಮೈಮೇಲೆ ಧರಿಸಿದರೆ ದೇಹಾರೋಗ್ಯಕ್ಕೂ ಹಿತಕರ. ಉಳಿತಾಯ ಮತ್ತು ಹೂಡಿಕೆ ಸದುಪಯೋಗಕ್ಕೆ ಶ್ರೇಷ್ಠ ವಸ್ತುವಾಗಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು
ಮದುವೆಯಾದ ಕ್ಷಣದಿಂದ ವಧು ಮಡದಿಯಾಗುತ್ತಾಳೆ. ಅವಳ ಮಾನ ಪ್ರಾಣ ರಕ್ಷಣೆ ಬರೀ ಬಾಯಿ ಮಾತಿನದ್ದಾಗಬಾರದು. ಆಥರ್ಿಕ ಭದ್ರತೆ ಸೇರಬೇಕು ಎಂಬ ವಿಚಾರಧಾರೆಯ ಪ್ರತ್ಯಕ್ಷ ಆಚರಣೆ ತಾಳಿಕಟ್ಟುವ ರೂಢಿಯಲ್ಲಿದೆ. ನೋಡಲು ಧಾಮರ್ಿಕ ವಿಧಿಯಾದರೂ ಮಡದಿಯ ರಕ್ಷಣೆ ತನು, ಮನ, ಧನಗಳಿಂದ ಮಾಡಬೇಕು ಎಂಬ ಅರ್ಥಪೂರ್ಣ ಅಥರ್ಿಕ ವಿಧಿಯನ್ನು ಜೀವನದಲ್ಲಿ ಅಳವಡಿಸಿದ್ದು ನಮ್ಮವರ ಅರ್ಥಶಾಸ್ತ್ರದ ಅನ್ವಯಿಸುವಿಕೆಗೆ ಉದಾಹರಣೆ ಎನ್ನುವುದಕ್ಕೆ ಸಾಕ್ಷಿ, ಮಾನ, ಪ್ರಾಣ ಹೋಗುವ ಪ್ರಸಂಗಗಳಲ್ಲಿ ಸ್ತ್ರೀ ತನ್ನ ಆಭರಣಗಳನ್ನು ಮತ್ತು ಕನಿಷ್ಠ ಬಂಗಾರದ್ದಾಗಿರುವ ತಾಳಿಯನ್ನು ಮಾರಿ ತನ್ನನ್ನು ತಾನು ರಕ್ಷಿಸಿಕೊಳ್ಳಲಿ ಎಂಬ ಸದಿಚ್ಛೆ ಇದೆ.
ಚಿನ್ನಾಭರಣ ಖರೀದಿಸುವ ಮೊದಲು ಅವುಗಳ ಪರಿಶುದ್ಧತೆ, ಮಳಿಗೆಗಳು ವಿಧಿಸುವ ಮಜೂರಿ, ಸವಕಳಿ ಶುಲ್ಕ ಕೆಡಿಎಂ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡರೆ ಒಳಿತು, ಖರೀದಿಗೆ ತೆರಳುವ ಮುನ್ನ ಕೆಲವು ಎಚ್ಚರಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು. ಚಿನ್ನದ ಕ್ಯಾರೆಟ್, ಬಿಐಎಸ್ ಹಾಲ್ಮಾಕರ್್ ಮೊದಲಾದವುಗಳ ಬಗ್ಗೆ ವಿವರವಾಗಿ ಅಲ್ಲದಿದ್ದರೂ ಕೆಲಮಟ್ಟಿಗಾದರೂ ತಿಳಿದುಕೊಂಡಿರುವುದು ಅಗತ್ಯ.
ಕಂಜೂಸು ಪತಿ, ಪ್ರಿಯಕರನಿಗೆ ಬುದ್ಧಿ ಕಲಿಸಲು ಕಾಯುತ್ತಿರುವ ವನಿತೆಯರಿಗೆ ಅಕ್ಷಯ ತದಿಗೆ ಬಂದರೆ ಬಲು ಖುಷಿ. ಇನಿಯಾ, ಉಳಿದ ದಿನ ಬದಿಗಿರಲಿ, ಅಕ್ಷಯ ತದಿಗೆಗಾದಾರ ಬಂಗಾರದ ಒಡವೆ ಕೊಡಿಸೆಯಾ ಎಂದು ನಯವಾಗಿ ಅವರನ್ನು ಪೇಚಿಗೆ ಸಿಲುಕಿಸಲು ಈ ದಿನ ಅವರ ಪಾಲಿನ ಸುದಿನ.
ಚಿನ್ನದ ಬೆಲೆಯು ಒಂದರ್ಥದಲ್ಲಿ ಮಾಯಾ ಜಿಂಕೆಯಂತಿದೆ. ಚಿನ್ನಾಭರಣ ಪ್ರಿಯರು, ಸಂಗ್ರಹಕಾರರು, ಹಣ ಹೂಡಿಕೆದಾರರು, ನಿರಂತರವಾಗಿ ಅದರ ಬೆನ್ನ ಹಿಂದೆ ಬಿದ್ದಿದ್ದಾರೆ. ಮಾಯಾ ಜಿಂಕೆ ಮಾತ್ರ ಇವರ ಅಂಕೆಗೆ ಸಿಗದೆ ಓಡುತ್ತಲೆ ಇದೆ. ಚಿನ್ನದ ಬೆಲೆ ಈ ಪರಿ ದಾಖಲೆ ಮಟ್ಟಕ್ಕೆ ತಲುಪಲು ಸ್ಥಳೀಯ ಕಾರಣಗಳೇನೂ ಪ್ರಭಾವ ಬೀರಿಲ್ಲ. ಸಾಗರೋತ್ತರ ಮಾರಕಟ್ಟೆಯಲ್ಲಿನ ವಿದ್ಯಮಾನಗಳೇ ಇದಕ್ಕೆ ಕಾರಣ.
ಭಾರಿ ಬೇಡಿಕೆ
ದೇಶದಲ್ಲಿ ದಿನವೊಂದಕ್ಕೆ ಸುಮಾರು 1.75 ಟನ್ ಚಿನ್ನದ ಖರೀದಿಯಾಗುತ್ತದೆ. ಆದರೆ ಅಕ್ಷಯ ತದಿಗೆ ದಿನದಂದು ಇದರ ಖರೀದಿ 7 ಟನ್ಗಳಿಗೆ ಮುಟ್ಟುತ್ತದೆ ಎನ್ನು ಅಂದಾಜು ಇದೆ. ಈ ಕಾರಣದಿಂದಲೇ ರಾಜ್ಯದ ಎಲ್ಲಾ ಚಿನ್ನದ ಮಳಿಗೆಗಳು ಅಂದು ನವವಧುವಿನಂತೆ ಕಂಗೊಳಿಸುತ್ತುದೆ. ಕಣ್ಣುಗಳನ್ನು ಕೋರೆಸುವ ವಿವಿಧ ನಮೂನೆಗಳ ಚಿನ್ನದ ಒಡವೆಗಳು ಮಳಿಗೆಗಳನ್ನು ಅಲಂಕರಿಸುತ್ತವೆ.
ಕಳೆದ ಬಾರಿ ಅಕ್ಷಯ ತದಿಗೆಯಂದು ಅನೇಕ ಚಿನ್ನದ ಮಳಿಗೆಗಳಲ್ಲಿ ಜನರ ಜಾತ್ರೆ ಎಷ್ಟಿತ್ತೆಂದರೆ ಅನೇಕ ಅಂಗಡಿಗಳನ್ನು ಜನರನ್ನು ನಿಯಂತ್ರಿಸಲಾರದೇ ಬಾಗಿಲನ್ನು ಮುಚ್ಚಿದ್ದವು. ಇನ್ನು ಅನೇಕ ಮಳಿಗೆಗಳು ಬೆಳಿಗ್ಗೆ 6 ಗಂಟೆಗೆ ತೆರೆದಿದ್ದವು. ಅವು ಮುಚ್ಚಿದ್ದು ಮರುದಿನ ಬೆಳಿಗ್ಗೆಯೇ! ಈ ದಿನದಂದು ವರ್ಷದಿಂದ ವರ್ಷಕ್ಕೆ ಚಿನ್ನದ ಖರೀದಿಗಾರರು ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಬಹುದೇನೋ.
2010ರಲ್ಲಿನ ಅಕ್ಷಯ ತದಿಗೆ ದಿನ 8 ಸಾವಿರ ಕೆ.ಜಿ. ಮಾರಾಟವಾಗಿದ್ದರೆ 2011ರಲ್ಲಿ 15 ಸಾವಿರ ಕೆ.ಜಿ.ಗೆ. ಏರಿತ್ತು. 2012ರಲ್ಲಿ ಇದರ ಸಂಖ್ಯೆ 40 ಸಾವಿರ ಕೆ.ಜಿ. ಮುಟ್ಟಿತ್ತು. 2013ರಲ್ಲಿ ಸುಮಾರು 60 ಸಾವಿರ ಕೆ.ಜಿ. ವಹಿವಾಟು ನಡೆದಿತ್ತು ಎನ್ನುತ್ತದೆ ವರದಿ.
ಯಾವುದು ಮರುಳು?
ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಅಕ್ಷಯ ತತೀಯದಂತಹ ಹಬ್ಬಗಳ ಹೆಸರಿನಲ್ಲಿ ಜನರನ್ನು ಮರಳು ಮಾಡಲು ಅಂಗಡಿಯ ಮಾಲೀಕರು ಕಾಯುತ್ತಾರೆ. ಉಚಿತ ಕೊಡುಗೆ, ರಿಯಾಯಿತಿ ಬೆಲೆಯಲ್ಲಿ ಆಭರಣಗಳ ಮಾರಾಟ ಬಲು ಜೋರು. ಸಂಪ್ರದಾಯದ ಹೆಸರಿನಲ್ಲಿ ಹಬ್ಬಗಳು ವಾಣಿಜ್ಯೀಕರಣ ಆಗುತ್ತಿದೆಯೇ ಅಥವಾ ಈ ಒಂದು ಪುಣ್ಯ ದಿನ ಚಿನ್ನ ಪಡೆದರೆ ಅದು ವೃದ್ಧಿಯಾಗುತ್ತದೇ ಎಂಬುದು ಅವರವರ ತರ್ಕಕ್ಕೆ ಬಿಟ್ಟ ವಿಚಾರ. ಬಂಗಾರವೇ ಬೇಕೆಂದೇನಿಲ್ಲ, ಬೆಳ್ಳಿಯನ್ನು ಪ್ಲಾಟಿನಂ ಹಾಗೂ ಚಿನ್ನಕ್ಕೆ ಪೂರಕವಾಗಿ ಬಳಸಬಹುದು. ಬೆಳ್ಳಿ ಲೋಹ, ಬಂಗಾರ ಪ್ಲಾಟಿನಂಗಳನ್ನು ಬೆಲೆ ಬಾಳುವಂತದ್ದೂ ಅಲ್ಲ. ಆದರೆ ಬೆಳ್ಳಿ ಕೂಡ ಆಕರ್ಷಕ ಲೋಹ. ಅದರಿಂದ ತಯಾರಿಸಿದ ನಾನಾ ವಿನ್ಯಾಸದ ಒಡವೆಗಳು ನಿಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಮೆರುಗು ನೀಡುತ್ತವೆ. ಚಿನ್ನ ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುವುದಿಲ್ಲ. ಅಲಜರ್ಿಯೂ ಉಂಟಾಗಬಹುದು. ಹೀಗಾಗಿ ಎಂಥ ಲೋಹದ ಆಭರಣ ತಮ್ಮ ಚರ್ಮಕ್ಕೆ ಸೂಕ್ತ ಎಂಬುದನ್ನು ತಿಳಿದುಕೊಂಡು ಅನಂತರ ಖರೀದಿಸಿ.
-ಗುರುರಾಜ ಪೋಶೆಟ್ಟಿಹಳ್ಳಿ
ದೂ: 9739369621