'ಖಾಲಿ ಶಿಲುಬೆ' ಕವನ ಸಂಕಲನ ಬಿಡುಗಡೆ
ಬೆಂಗಳೂರು: ಪತ್ರಕರ್ತ ಚಂದ್ರಚೂಡ್ ಅವರ 'ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮಪದ್ಯಗಳು) ಕವನ ಸಂಕಲನವು ಚಾಮರಾಜಪೇಟೆಯ ಜಿಂಕೆ ಪಾರ್ಕ್ ಸಮೀಪದ ಲಿಂಗಾಯತ ರುದ್ರಭೂಮಿಯಲ್ಲಿ ಬಿಡಗಡೆಯಾಯಿತು.
ಪ್ರಕಾಶಕ ಡಾ.ರವೀಂದ್ರ ಎಚ್.ಎನ್., ಹಿರಿಯ ಸಾಹಿತಿಗಳಾದ ಹಂಪನಾ, ಬೊಳುವಾರು ಮಹಮ್ಮದ್ ಕುಂಞಿ, ದೂರದರ್ಶನ ಕಾರ್ಯನಿರ್ವಾಹಕಿ ಆರತಿ ಎಚ್.ಎನ್, ಹಿರಿಯ ಲೇಖಕಿಯರಾದ ಸುಧಾ ಚಿದಾನಂದ ಗೌಡ, ಮಮತಾ ಸಾಗರ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.