ಮತ್ತೆ ವಿದೇಶ ಪ್ರವಾಸಕ್ಕೆ ಸಿದ್ಧವಾದ 15 ಶಾಸಕರ ತಂಡ
ಬೇಸಿಗೆಯ ಬರದ ನಡುವೆಯೂ ಶಾಸಕ ತನ್ವೀರ್ ...
ಬೆಂಗಳೂರು: ಬೇಸಿಗೆಯ ಬರದ ನಡುವೆಯೂ ಶಾಸಕ ತನ್ವೀರ್ ಸೇಠ್ ನೇತೃತ್ವದ 15 ಶಾಸಕರ ಮತ್ತೊಂದು ತಂಡ ಪ್ರವಾಸಕ್ಕೆಂದು ವಿದೇಶಕ್ಕೆ ಹಾರಲು ಸಿದ್ಧವಾಗಿ ನಿಂತಿದೆ.
ವಿಧಾನಸಭೆ ಭರವಸೆಗಳ ಸಮಿತಿಯ ಶಾಸಕರ ತಂಡ ಮೇ 20ರಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳಿಗೆ ಪ್ರವಾಸ ಕೈಗೊಂಡಿದೆ. ಆದರೆ ಪ್ರವಾಸಕ್ಕೆ ಅನುಮತಿ ನೀಡಬೇಕಾದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಭರವಸೆಯ ಸಮಿತಿಯಿಂದ ಶಾಸಕರ ವಿದೇಶ ಪ್ರವಾಸದ ಕುರಿತು ತಮಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
ಪ್ರವಾಸಕ್ಕೆ ತೆರಳುತ್ತಿರುವ ಶಾಸಕರ ತಂಡ
ತನ್ವೀರ್ ಸೇಠ್
ಆನಂದ್ ಸಿ. ಮಾಮನಿ
ಅರವಿಂದ್ ಬೆಲ್ಲದ್
ಈಶ್ವರ್ ಖಂಡ್ರೆ
ದುಯೋರ್ಧನ ಐಹೊಳೆ
ಟಿ.ರಘುಮೂರ್ತಿ
ಎಚ್.ಸಿ.ಬಾಲಕೃಷ್ಣ
ಯು.ಬಿ.ಬಣಕಾರ್
ಸಿದ್ದು ಬಿ. ನ್ಯಾಮಗೌಡ
ವಿಜಯಾನಂದ ಕಾಶಪ್ಪನವರ್
ಮಲ್ಲಿಕಾರ್ಜುನ್ ಖೂಬಾ
ಇನ್ನು ಈ ತಂಡದಲ್ಲಿರುವ ಕಡೂರು ಶಾಸಕ ವೈಎಸ್ವಿ ದತ್ತಾ ಹಾಗೂ ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ತಾವು ವಿದೇಶ ಪ್ರವಾಸಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.