ಆಂಧ್ರದಲ್ಲಿ ಮೋದಿ ಘರ್ಜನೆ
ಮದನಪಲ್ಲಿ ಮತ್ತು ಸೀಮಾಂಧ್ರದಲ್ಲಿ ಪ್ರಚಾರ ನಡೆಸಿದ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನೆಲ್ಲೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಮತ್ತು ಸೀಮಾಂಧ್ರದಲ್ಲಿ ಪ್ರಚಾರ ನಡೆಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆಂಧ್ರದ ನೆಲ್ಲೂರಿನಲ್ಲಿ ತೆಲುಗು ದೇಶಂ ಪಕ್ಷದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ರಿಮೋಟ್ ಕಂಟ್ರೋಲ್ ಸರ್ಕಾರ ಅಧಿಕಾರದಲ್ಲಿದೆ. ಇಂತಹ ಸರ್ಕಾರದ ಅವಶ್ಯತಯೆ ಇದೆಯೇ ಎಂದರು. ಕಾಂಗ್ರೆಸ್‌ನ ದುರಾಡಳಿತಕ್ಕೆ ಕೊನೆಯೆ ಇಲ್ಲ ಭ್ರಷ್ಟಚಾರದ ಮೂಲಕ ಕಾಂಗ್ರೆಸ್ಸಿಗರು ದೇಶವನ್ನು ಲೂಟಿ ಹೊಡೆದಿದ್ದಾರೆ. ದೇಶದ ಅಭಿವೃದ್ಧಿಯನ್ನು ಬದಿಗಿಟ್ಟು ಲೂಟಿ ಹೊಡೆಯುತ್ತಿರುವ ಇಂತಹ ಲೂಟಿಕೋರರಿಗೆ ಮತದಾರರ ಮತ ನೀಡಬೇಡಿ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ದೇಶದ ಪ್ರತಿಯೊಂದು ನದಿಗಳನ್ನು ಜೋಡನೆ ಮಾಡಲಾಗುವುದು ಇದರಿಂದ ದೇಶದಲ್ಲಿ ಕುಡಿಯುವ ನೀರಿನ ಅಭಾವ ಕಡಿಮೆಯಾಗುತ್ತದೆ. ನದಿಗಳ ಜೋಡನೆಯಿಂದಾಗಿ ಸೀಮಾಂಧ್ರದ ರೈತರಿಗೆ ಪ್ರಯೋಜನವಾಗುತ್ತದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸೃಷ್ಠಿಯಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಜನತೆ ಎನ್‌ಡಿಎಯನ್ನು ಬೆಂಬಲಿಸುತ್ತಾರೆ ಇದರೊಂದಿಗೆ ದೇಶದ ಭವಿಷ್ಯ ಬದಲಾಗಲಿದೆ ಎಂದರು. ಹೀಗಾಗಿ ನಿಮ್ಮ ಮತ ಸಮೈಕಾಂಧ್ರಕ್ಕೆ ನೀಡಿ ಹೊರತು ಸ್ಕ್ಯಾಮಾಂಧ್ರಕ್ಕೆ ನೀಡಬೇಡಿ ಎಂದರು.