ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೋಶಿ ನದಿ ಪ್ರವಾಹದ ಎಚ್ಚರಿಕೆ ನೀಡಿದ ಬಿಹಾರ ಸರ್ಕಾರ

ಭಾರಿ ಮಳೆಯಿಂದಾಗಿ ಕೋಶಿ ನದಿ ಉಕ್ಕಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲೂ ಪ್ರವಾಹ ಉಂಟಾಗಬಹುದು...

Mainashree
Updated On : 2 Aug 2014, 4:46 am

ಪಾಟ್ನಾ: ಭಾರಿ ಮಳೆಯಿಂದಾಗಿ ಕೋಶಿ ನದಿ ಉಕ್ಕಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲೂ ಪ್ರವಾಹ ಉಂಟಾಗಬಹುದು ಎಂದು ಬಿಹಾರ ಸರ್ಕಾರ ಶನಿವಾರ ಹೇಳಿದೆ.

ಪ್ರವಾಹ ಯಾವುದೇ ಕ್ಷಣದಲ್ಲಿ ಎದುರಾಗಬಹುದು, ಆದ್ದರಿಂದ ಸ್ಥಳೀಯರಿಗೆ ಸ್ಥಳಾಂತರಿಸಿ ಎಂದು ಬಿಹಾರ ಸರ್ಕಾರ ಎಚ್ಚರಿಕೆ ನೀಡಿದೆ.

ಬಿಹಾರದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಉತ್ತರ ದಿಕ್ಕಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚು ಕಂಡುಬಂದಿದೆ. ಅಲ್ಲದೇ ಕೋಶಿ ನೀರಿನ ಮಟ್ಟ ಏರಿಕೆಯಾಗಿದ್ದು, ಯಾವುದೇ ಕ್ಷಣದಲ್ಲೂ ಪ್ರವಾಹ ಉಂಟಾಗುತ್ತದೆ ಹಾಗೂ ನದಿ ಉಕ್ಕಿ ಹರಿಯುತ್ತಿರುವುದರಿಂದ ಭೂಕುಸಿತವು ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಹಿನ್ನಲೆಯಲ್ಲಿ ಬಿಹಾರ ಸರ್ಕಾರ ಇಲ್ಲಿನ ಜನರಿಗೆ ಸ್ಥಳಾಂತರಿಸುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement