ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸರ್ಕಾರ ಶೀಘ್ರ ಅರಮನೆ ವಿವಾದ ಬಗೆಹರಿಸಲಿ: ರಾಣಿ ಪ್ರಮೋದಾ ದೇವಿ

ರಾಜ್ಯ ಸರ್ಕಾರ ಮೈಸೂರು ಅರಮನೆಯ ವಿವಾದವನ್ನು ಶೀಘ್ರವೇ ಬಗೆಹರಿಸಲಿ ಎಂದು ದಿವಂಗತ ಶ್ರೀಕಂಠದತ್ತ ಒಡೆಯರ್...

Lingaraj Badiger
Updated On : 2 Aug 2014, 7:16 am

ಮೈಸೂರು: ರಾಜ್ಯ ಸರ್ಕಾರ ಮೈಸೂರು ಅರಮನೆಯ ವಿವಾದವನ್ನು ಶೀಘ್ರವೇ ಬಗೆಹರಿಸಲಿ ಎಂದು ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ರಾಣಿ ಪ್ರಮೋದಾ ದೇವಿ ಅವರು ಶನಿವಾರ ಒತ್ತಾಯಿಸಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹಾರಾಣಿ, ಮೈಸೂರು ಅರಮನೆ ವಿವಾದವನ್ನು ಸರ್ಕಾರ ಮೊದಲು ಬಗೆಹರಿಸಲಿ, ನಂತರ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು. ಒಂದು ವೇಳೆ ಸರ್ಕಾರ ವಿವಾದ ಬಗೆಹರಿಸದಿದ್ದರೆ ಖಾಸಗಿಯಾಗಿ ದಸರಾ ಆಚರಿಸಲಿ. ವಿವಾದಗಳ ಜೊತೆ ಉತ್ತರಾಧಿಕಾರಿ ನೇಮಕ ಅಸಾಧ್ಯ. ನ್ಯಾಯಾಲಯದ ಹೊರಗೂ ನಾವು ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ. ಆದರೆ ಇದುವರೆಗೂ ಯಾವುದೇ ಸರ್ಕಾರ ನಮಗೆ ಮಾತುಕತೆಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ. ಅಲ್ಲದೆ ನಾವು ಅನುಭವಿಸುತ್ತಿರುವ ತೊಂದರೆ ಮುಂದಿನ ಪೀಳಿಗೆಗೆ ಬರಬಾರದು ಎಂದು ಹೇಳಿದ್ದಾರೆ.

ಅರಮನೆ ವಿವಾದಕ್ಕೆ ಸಂಬಂಧಿಸಿದಂತೆ ನಾವು ರಾಜ್ಯ ಸರ್ಕಾರಗಳಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. 1978ರಿಂದ ಬಂದ ಎಲ್ಲಾ ಸರ್ಕಾರಗಳಿಂದಲೂ ನಮಗೆ ತೊಂದರೆಯಾಗಿದೆ. ನಾವು ಎಂದೂ ಅದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಅದನ್ನು ನಾನು ಜನರಿಗೆ ತಿಳಿಸುತ್ತಿದ್ದೇನೆ ಎಂದು ಪ್ರಮೋದಾ ದೇವಿ ತಮ್ಮ ನೋವು ತೊಡಿಕೊಂಡಿದ್ದಾರೆ.

ಇದೇ ವೇಳೆ ಮಹಾರಾಣಿ ಪ್ರಮೋದಾ ದೇವಿ ಅವರು ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರನ್ನು ನೆನೆದು ಕಣ್ಣೀರಿಟ್ಟರು.

ದಸರಾ ಹಬ್ಬ ಖಾಸಗಿ ಆಚರಣೆ ಅಲ್ಲ, ನಾವೆಂದೂ ಇದನ್ನು ಖಾಸಗಿ ಹಬ್ಬವಾಗಿ ಆಚರಿಸಿಲ್ಲ. ವಿಶ್ವ ವಿಖ್ಯಾತ ಮೈಸೂರು ದಸಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಸಂಪ್ರದಾಯದಂತೆ ದಸರಾ ನಡೆಯಲಿದೆ ಎಂದು ರಾಣಿ ತಿಳಿಸಿದ್ದಾರೆ.

ಸರ್ಕಾರ ನಡೆಸುವ ದಸರಾ ಒಂದು ಖಾಸಗಿ ಉತ್ಸವ. ಆದರೆ ರಾಜಮನೆತನದವರು ನಡೆಸುವ ದಸರಾ ಧಾರ್ಮಿಕ ಆಚರಣೆ. ಅರಮನೆ ಹಾಗೂ ರಾಜಮನೆತನವರಿಲ್ಲದೆ ಸರ್ಕಾರ ಹೇಗೆ ದಸರಾ ನಡೆಸುತ್ತದೆ ಎಂದು ಮಹಾರಾಣಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement