ಅಗ್ನಿ ಅವಘಡ: ಹೊತ್ತಿ ಉರಿಯುತ್ತಿರುವ ಖಾಸಗಿ ಬಸ್ಗಳು
ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಟಿ.ಆರ್. ಮಿಲ್ನಲ್ಲಿ ಭಾನುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಖಾಸಗಿ ಬಸ್ಗಳು ಹೊತ್ತಿ ಹೊರಿಯುತ್ತಿವೆ.
ಜಾಮರಾಜಪೇಟೆಯಲ್ಲಿನ ಖಾಸಗಿ ಬಸ್ಗಳ ಪಾರ್ಕಿಂಗ್ ಲಾಟ್ನಲ್ಲಿ ಸಂಜೆ 5 ಗಂಟೆ ಸುಮಾರಿನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ದುಷ್ಕರ್ಮಿಗಳು ಪಾರ್ಕಿಂಗ್ ಲಾಟ್ನಲ್ಲಿದ್ದ ಟೈರ್ಗೆ ಬೆಂಕಿ ಹಚ್ಚಿದ್ದಾರೆ. ಟೈರ್ಗೆ ತಗುಲಿದ ಬೆಂಕಿ ನಂತರ ಪಕ್ಕದಲ್ಲೇ ಇದ್ದ ಬಸ್ಗಳಿಗೆ ವ್ಯಾಪಿಸಿದೆ ಇದರಿಂದ ಸ್ಥಳದಲ್ಲೇ ಇದ್ದ 4 ಬಸ್ಗಳು ಸುಟ್ಟು ಕರಕಲಾಗಿದೆ.
ಇಂದು ಭಾನುವಾರವಾದುದ್ದರಿಂದ 40 ರಿಂದ 50 ಖಾಸಗಿ ಬಸ್ ಗಳನ್ನು ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಲಾಗಿತ್ತು.
ಬೆಂಕಿಯ ಕೆನ್ನಾಲಿಗೆಗೆ 4 ಬಸ್ಗಳು ಹೊತ್ತು ಉರಿಯುತ್ತಿದ್ದು, ದಟ್ಟ ಹೊಗೆ ಆವರಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ 10 ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.