ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ

ತಂದೆಯೊಂದಿಗೆ ತೋಟಕ್ಕೆ ತೆರಳಿದ್ದಾಗ ತೆರೆದ ಕೊಳವೆ ಬಾವಿಗೆ 6 ವರ್ಷದ ಬಾಲಕ ಬಿದ್ದಿರುವ ಘಟನೆ ಭಾನುವಾರ ನಡೆದಿದೆ.

Vishwanath S
Updated On : 3 Aug 2014, 7:34 am

ಸೂಳಿಕೇರಿ: ತಂದೆಯೊಂದಿಗೆ ತೋಟಕ್ಕೆ ತೆರಳಿದ್ದಾಗ ತೆರೆದ ಕೊಳವೆ ಬಾವಿಗೆ 6 ವರ್ಷದ ಬಾಲಕ ಬಿದ್ದಿರುವ ಘಟನೆ ಭಾನುವಾರ ನಡೆದಿದೆ.

ಬಾಗಲಕೋಟೆಯ ಬಾದಾಮಿ ಜಿಲ್ಲೆಯ ಸೂಳಿಕೇರಿ ಗ್ರಾಮದ ಹನುಮಂತ ಹಟ್ಟಿ ಎಂಬುವರ ಮಗ ತಿಮ್ಮಣ್ಣ ಹಟ್ಟಿ ಎಂಬ ಬಾಲಕನೇ ಕೊಳವೆ ಬಾವಿಗೆ ಬಿದ್ದಿರುವ ದುರಾದೃಷ್ಟವಂತ.

ಕಳೆದ 15 ದಿನಗಳ ಹಿಂದೆಯಷ್ಟೇ ಸುಮಾರು 300 ಅಡಿ ಆಳದ ಕೊಳವೆ ಬಾವಿಯನ್ನು ಹನುಮಂತ ಹಟ್ಟಿಯವರು ಕೊರೆಸಿದ್ದರು. ಆದರೆ ನೀರು ಸಿಗದ ಕಾರಣ ಅದನ್ನು ಹಾಗೇ ಬಿಡಲಾಗಿತ್ತು. ಇಂದು ತಂದೆಯೊಂದಿಗೆ ತೋಟಕ್ಕೆ ತೆರಳಿದ್ದಾಗ ದುರಾದೃಷ್ಟವಶಾತ್ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ.

ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಊರಿನ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕನ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ತೊಡಗಿದ್ದಾರೆ.

ಸುಮಾರು 160 ಅಡಿ ಆಳದಲ್ಲಿ ಬಾಲಕ ಸಿಲುಕಿರುವುದಾಗಿ ತಿಳಿದುಬಂದಿದೆ. ಬಾವಿಯೊಳಗೆ ಸಿಸಿಟಿವಿಯನ್ನು ಇಳಿಬಿಟ್ಟಿದ್ದಾಗ ತಿಮ್ಮಣ್ಣನ ಕೈ ಕಾಣಿಸಿದೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ತೋಟಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದಿರುವುದರಿಂದ 2 ಜೆಸಿಬಿ ವಾಹನಗಳನ್ನು ತರೆಸಿ ತೋಟದ ಮನೆಯ ರಸ್ತೆಯನ್ನು ಸರಿಪಡಿಸಲಾಗುತ್ತಿದೆ ಎಂದು ಡಿಎಸ್ಪಿ ವಿಠ್ಠಲ್ ಜಗಲಿ ಅವರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಕ್ಕೆ ಸಂಬಂಧಿಸಿದಂತೆ ಆಂಧ್ರ ಹಾಗೂ ಹಟ್ಟಿ ಚಿನ್ನದ ಗಣಿ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಬಂದ ನಂತರ ರಕ್ಷಣಾ ಕಾರ್ಯ ಆರಂಭಿಸಲಾಗುತ್ತದೆ ಎಂದರು. 



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement