ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಲಕನನ್ನು ಮೇಲೆತ್ತಲು ಶಕ್ತಿ ಮೀರಿ ಪ್ರಯತ್ನ: ಐಜಿಪಿ ಭಾಸ್ಕರರಾವ್

Vishwanath S
Updated On : 4 Aug 2014, 6:03 am

ಬಾಗಲಕೋಟೆ: ಕೊಳವೆ ಬಾವಿಗೆ ಆರು ವರ್ಷದ ಬಾಲಕ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಮೇಲೆತ್ತಲು ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರವಲಯ ಐಜಿಪಿ ಭಾಸ್ಕರ ರಾವ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕ ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯದಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ಬಾಲಕನ ತಂದೆ ಮಾತ್ರ ಜವಾಬ್ದಾರರಲ್ಲ, ಈ ಘಟನೆಗೆ ಇನ್ನೂ ಕೆಲವರು ಕಾರಣವಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಪ್ರಕರಣ ಸಂಬಂಧ ಸೂಳೀಕೆರಿ ಗ್ರಾ.ಪಂ ಪಿಡಿಒ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಮುಂಜಾಗ್ರತೆ ಕೈಗೊಂಡಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ ಎಂದು ಐಜಿಪಿ ಹೇಳಿದರು. ಈ ರೀತಿ ಪ್ರಕರಣಗಳು ನಡೆದ ನಂತರ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಸರ್ಕಾರ ಆದೇಶ ನೀಡಿದ್ದರೂ ಯಾರೂ ಗಮನವಹಿಸುತ್ತಿಲ್ಲ ಎಂದು ಐಜಿಪಿ ಹೇಳಿದರು.

ಈ ನಡುವೆ ಕೊಳವೆಬಾವಿಯಲ್ಲಿರುವ ಬಾಲಕ ತಿಮ್ಮಣ್ಣನ ಮೇಲೆ ಕಲ್ಲು ಬೀಳುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಕ್ಯಾಮೆರಾ, ಹಗ್ಗ ಮೇಲಕ್ಕೆತ್ತಲಾಗಿದೆ ಎಂದರು.

ಕೊಳವೆ ಬಾವಿ 12ರಿಂದ 14 ಇಂಚು ಅಗಲವಾಗಿತ್ತು. ಬೋರ್‌ವೆಲ್ ತೆಗೆಯಲು 8 ಇಂಚು ಡ್ರಿಲ್ ಬಿಟ್ ಬಳಕೆ ಮಾಡಲಾಗಿತ್ತು.  ಕೊಳವೆ ಬಾವಿಯ ಅಗಲ ದೊಡ್ಡದಾಗಿದ್ದರಿಂದ ಈ ಅನಾಹುತ ಸಂಭವಿಸಿದೆಯೆಂದು ಹೇಳಲಾಗಿದೆ. ಕೆಲವು ಸಲಕರಣೆ ಸಿಲುಕಿದ ಕಾರಣದಿಂದ ಕೇಸಿಂಗ್ ತೆಗೆಯಲಾಗಿತ್ತು ಭಾಗೀರಥಿ ಬೋರ್‌ವೆಲ್ ಮಾಲೀಕ ರಿಜ್ವಾನ್ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement