ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲವ್ ಲೆಟರ್ ವಿವಾದ: ಹಿಂದಕ್ಕೆ ತೆರಳಿದ ಶ್ರೀಲಂಕಾ ಅಂಡರ್ 15 ಕ್ರಿಕೆಟ್ ತಂಡ

ಜಯಲಲಿತಾ ಲವ್ ಲೆಟರ್ ಟು ಮೋದಿ ಪ್ರಕರಣಕ್ಕೆ...

Vishwanath S
Updated On : 4 Aug 2014, 5:18 am

ಚೆನ್ನೈ: ಜಯಲಲಿತಾ ಲವ್ ಲೆಟರ್ ಟು ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಠಿಯಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ಖಾಸಗಿ ಕ್ರಿಕೆಟ್ ಪಂದ್ಯದಲ್ಲಿ ಆಡಲು ಬಂದಿದ್ದ ಶ್ರೀಲಂಕಾದ ಅಂಡರ್ 15 ತಂಡವನ್ನು ಹಿಂದಕ್ಕೆ ಕಳಿಸಲಾಗಿದೆ.

ಕಳೆದ ರಾತ್ರಿ ಕೊಲಂಬೋದಿಂದ ಶ್ರೀಲಂಕಾ ಜೂನಿಯರ್ ಕ್ರಿಕೆಟ್ ತಂಡದ 16 ಆಟಗಾರರು ಚೆನ್ನೈಗೆ ಬಂದಿಳಿದಿದ್ದರು. ಸುರಕ್ಷಿತ ದೃಷ್ಟಿಯಿಂದಾಗಿ ಶ್ರೀಲಂಕಾ ಆಟಗಾರರನ್ನು ಹಿಂದಕ್ಕೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ ಇಂದಿನಿಂದ ಆಗಸ್ಟ್ 7ರವರೆಗೆ ಖಾಸಗಿ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಶ್ರೀಲಂಕಾದ ಕ್ರಿಕೆಟ್ ತಂಡ ಸಹ ಆಗಮಿಸಿತ್ತು.

ಕಳೆದ ಶುಕ್ರವಾರ ಶ್ರೀಲಂಕಾ ರಕ್ಷಣಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಜಯಾಲಲಿತಾ ವಿರುದ್ಧ ಅವಹೇಳನಕಾರಿ ಲೇಖನವನ್ನು ಪ್ರಕಟಿಸಿತ್ತು.
ವೆಬ್‌ಸೈಟ್‌ನಲ್ಲಿ ಈ ಹಿಂದೆ ಯುಪಿಎ ಸರ್ಕಾರಕ್ಕೆ ಬರೆಯುತ್ತಿದ್ದಂತೆ ಮೋದಿಗೂ ಪತ್ರ ಬರೆದರೆ ಏನು ನಡೆಯೋದಿಲ್ಲ. ಮೋದಿ ಮೇಲೆ ಪ್ರಭಾವ ಬೀರಬೇಕಾದ್ರೆ ಜಯಲಲಿತಾ ಪ್ರೇಮ ಪತ್ರದ ರೀತಿಯಲ್ಲಿ ಪತ್ರ ಬರಬೇಕಾಗುತ್ತೆ ಎಂದು ಬರೆಯಲಾಗಿದೆ.

ಅವಹೇಳನಕಾರಿ ಲೇಖನ ಪ್ರಕಟವಾಗುತ್ತಿದಂತೆ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement