ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಡೋದರಾದಲ್ಲಿ ಈಜಿ ಶಾಲೆಗೆ ಹೋಗುವ ಮಕ್ಕಳು

ವಡೋದರಾದಲ್ಲಿ ಬುಡಕಟ್ಟು ಜನಾಂಗದ ನೂರಾರು ಮಂದಿ ಹುಡುಗ ಹುಡುಗಿಯರು ದಿನ...

Vishwanath S
Updated On : 4 Aug 2014, 7:20 am

ವಡೋದರಾ: ವಡೋದರಾದಲ್ಲಿ ಬುಡಕಟ್ಟು ಜನಾಂಗದ ನೂರಾರು ಮಂದಿ ಹುಡುಗ ಹುಡುಗಿಯರು ದಿನ ನಿತ್ಯ ನದಿಯಲ್ಲಿ ಈಜಿ ಶಾಲೆಗೆ ಹೋಗುವ ಪರಿಸ್ಥಿತಿ ಉಬ್ಧವಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ಹಾಗೂ ದೇಶದ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿರುವ ಗುಜರಾತ್‌ನಲ್ಲಿ ಸುಮಾರು ನೂರು ವಿದ್ಯಾರ್ಥಿಗಳು ತಮ್ಮ ಸಮೀಪದ ಶಾಲೆಗಳಿಗೆ ನದಿಗಳಲ್ಲಿ ಈಜಿಕೊಂಡು ಹೋಗುತ್ತಾರೆ ಎನ್ನುವ ಆಶ್ಚರ್ಯಕರ ಸತ್ಯ ಸಂಗತಿ ಈಗ ಬಯಲಾಗಿದೆ.

ಗುಜರಾತ್‌ನ ನರ್ಮದಾ ಜಿಲ್ಲೆಯ 16 ಬುಡಕಟ್ಟು ಗ್ರಾಮಗಳ ಹುಡುಗರು ಮತ್ತು ಹುಡುಗಿಯರು ಉಟವಾಡಿಯಲ್ಲಿನ ತಮ್ಮ ಸಮೀಪದ ಶಾಲೆಗೆ ಹೋಗಲು ದಿನನಿತ್ಯ 600 ಮೀಟರ್‌ ಅಗಲದ ಹಿರಣ ನದಿಯನ್ನು ಈಜಿಕೊಂಡು ಹೋಗುತ್ತಾರೆ. ಅಲ್ಲಿ ದಡ ತಲುಪಿದ ಬಳಿಕ ಅವರು ಇನ್ನೂ ಐದು ಕಿ.ಮೀ. ನಡೆದುಕೊಂಡು ಶಾಲೆಯನ್ನು ತಲುಪುತ್ತಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement