ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಎಸ್‌ಐಎಸ್ ಟಿ-ಶರ್ಟ್ ಪ್ರಕರಣ: ತ.ನಾಡಿನಲ್ಲಿ ಇಬ್ಬರ ಬಂಧನ

ಸುನ್ನಿ ಉಗ್ರ ಸಂಘಟನೆ ಐಎಸ್‌ಐಎಸ್ ಎಂಬ ಬರಹ ಇರುವ ಟಿ-ಶರ್ಟ್...

Lingaraj Badiger
Updated On : 5 Aug 2014, 12:37 pm

ರಾಮನಾಥಪುರಂ: ಸುನ್ನಿ ಉಗ್ರ ಸಂಘಟನೆ ಐಎಸ್‌ಐಎಸ್ ಎಂಬ ಬರಹ ಇರುವ ಟಿ-ಶರ್ಟ್ ಧರಿಸಿದ ಗ್ರೂಪ್ ಫೋಟೊ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಉಗ್ರ ಸಂಘಟನೆಗೆ ಸೇರಿದ ಟಿ-ಶರ್ಟ್‌ಗಳನ್ನು ವಿತರಿಸಿದ ಮತ್ತು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ ಆರೋಪದ ಮೇಲೆ ಅಬ್ದುಲ್ ರೇಹಮಾನ್ ಹಾಗೂ ರಿಲ್ವಿನ್ ಎಂಬ ಇಬ್ಬರು ಯುವಕರನ್ನು ರಾಮನಾಥಪುರಂ ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ ಐಎಸ್‌ಐಎಸ್ ನಿಷೇಧಿತ ಉಗ್ರ ಸಂಘಟನೆ ಅಲ್ಲ. ಆದರೆ ಸಿರಿಯಾ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಸಂಘಟನೆಯಾಗಿದ್ದು, ಈ ಇಬ್ಬರು ಯುವಕರು ಆ ಸಂಘಟನೆಯ ಸಕ್ರಿಯ ಕಾರ್ಯಾಕರ್ತರಾಗಿದ್ದಾರೆ ಮತ್ತು ಐಎಸ್‌ಐಎಸ್ ಬರಹ ಇರುವ ಟಿ-ಶರ್ಟ್‌ಗಳನ್ನು ವಿತರಿಸುವ ಮೂಲಕ ಸಂಘಟನೆಗೆ ಬೆಂಬಲ ಕೋರುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement