ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಚಾರಕ್ಕಾಗಿ ಅತ್ಯಾಚಾರ ಆರೋಪ: ರೂಪದರ್ಶಿ ಮಾಜಿ ವಕೀಲ ಹೇಳಿಕೆ

ಪ್ರಚಾರಕ್ಕಾಗಿ ಡಿಐಜಿ ಸುನಿಲ್ ಪರಾಸ್ಕರ್ ವಿರುದ್ಧ ರೂಪದರ್ಶಿ ಅತ್ಯಾಚಾರ ಆರೋಪ...

Mainashree
Updated On : 5 Aug 2014, 2:48 am

ಮುಂಬೈ: ಪ್ರಚಾರಕ್ಕಾಗಿ ಡಿಐಜಿ ಸುನಿಲ್ ಪರಾಸ್ಕರ್ ವಿರುದ್ಧ ರೂಪದರ್ಶಿ ಅತ್ಯಾಚಾರ ಆರೋಪ ಮಾಡಿದ್ದಾಳೆ ಎಂದು ರೂಪದರ್ಶಿ ಮಾಜಿ ವಕೀಲ ರಿಜ್ವಾನ್ ಸಿದ್ದಿಕ್ ಹೇಳಿದ್ದಾರೆ.

ಟಿವಿ ಶೋನಲ್ಲಿ ಭಾಗವಹಿಸುವ ಉದ್ದೇಶದಿಂದ ಪ್ರಚಾರ ಪಡೆಯಲು ರೂಪದರ್ಶಿ ಡಿಐಜಿ ವಿರುದ್ಧ ಅತ್ಯಾಚಾರಾ ಆರೋಪ ಮಾಡಿದ್ದಾಳೆ ಎಂದು ವಕೀಲ ರಿಜ್ವಾನ್ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಡಿಐಜಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಸಂಬಂಧ ರೂಪದರ್ಶಿ ಮಾಜಿ ವಕೀಲ ರಿಜ್ವಾನ್ ಸಿದ್ದಿಕ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಯ್ಬಿಟ್ಟ ವಕೀಲ, ರೂಪದರ್ಶಿ ಪ್ರಚಾರಕ್ಕಾಗಿ ಈ ಆರೋಪ ಮಾಡಿದ್ದಾಳೆ. ಈ ಪ್ರಕರಣ ಸಂಬಂಧ ಆಕೆಯೊಂದಿಗೆ ನಡೆಸಿರುವ ಚರ್ಚೆ ಸಿಸಿಟಿವಿ ಫೂಟೇಜ್‌ನಲ್ಲಿ ಸೆರಿಯಾಗಿದೆ ಎಂದು ರಿಜ್ವಾನ್ ಹೇಳಿದ್ದಾರೆ.

ಸಿಸಿಟಿವಿ ಫೂಟೇಜ್‌ನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚೆಗಷ್ಟೇ ಮಾಡೆಲ್ ಒಬ್ಬಳು, ಮಹಾರಾಷ್ಟ್ರದ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಪರಾಸ್ಕರ್ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರವಸಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ದೂರಿನ ಅನ್ವಯ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಾಗಿಸಿ, ಪೊಲೀಸರು ತನಿಖೆ ಕೈಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement