ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅರೇಬಿ ಹುಡುಗರಿಗಿಲ್ಲ, ಪಾಕ್ ಹುಡುಗಿಯರೊಂದಿಗೆ ಕಂಕಣ ಭಾಗ್ಯ

ಸೌದಿ ಅರೇಬಿಯಾ ಹುಡುಗರು ಇನ್ನು ಮುಂದೆ ವಿದೇಶೀ...

Vishwanath S
Updated On : 6 Aug 2014, 7:06 am

ರಿಯಾದ್: ಸೌದಿ ಅರೇಬಿಯಾ ಹುಡುಗರು ಇನ್ನು ಮುಂದೆ ವಿದೇಶೀ ಹುಡುಗಿಯರನ್ನು ಮದುವೆಯಾಗಬಾರದು ಎಂದು ಸೌದಿ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ.

ಈ ಕುರಿತು ಖಾಸಗಿ ಸೌದಿ ಮೆಕ್ಕಾ ದಿನಪತ್ರಿಕೆಯೊಂದು ವರದಿ ಮಾಡಿದ್ದು, ಪತ್ರಿಕೆಯಲ್ಲಿರುವ ಪ್ರಕಾರ ಸೌದಿ ಸರ್ಕಾರ ಇನ್ನು ಮುಂದೆ ಸೌದಿಯ ಹುಡುಗರು ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್‌ ಮತ್ತು ಮಾಯಾನ್ಮಾರ್ ದೇಶದ ಯುವತಿಯರನ್ನು ಮದುವೆಯಾಗುವಂತಿಲ್ಲ ಎಂದು ತಿಳಿಸಿದೆ.

ಪ್ರಸ್ತುತ ಸೌದಿಯಲ್ಲಿ ಸುಮಾರು 5 ಲಕ್ಷ ಮಹಿಳೆಯರು ಈ ನಾಲ್ಕು ದೇಶಗಳಿಂದ ಬಂದಿರುವವರಾಗಿದ್ದಾರೆ. ಹೀಗಾಗಿ ಇಲ್ಲಿನ ಹುಡುಗಿಯರೊಂದಿಗಿನ ಮದುವೆಗೆ ಸರ್ಕಾರ ಬ್ರೇಕ್ ಹಾಕಿದೆ.

ಒಂದು ವೇಳೆ ವಿದೇಶದಿಂದ ಮದುವೆ ಪ್ರಸ್ತಾಪ ಬಂದಿದ್ದೇ ಆದರೆ ಯುವಕ ಯುವತಿಯರು 25 ವರ್ಷದೊಳಗೆ ಇರಬೇಕಿದ್ದು ಮದುವೆ ವಿಷಯ ಪ್ರಸ್ತಾಪವನ್ನು ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರದ ಅನುಮತಿ ದೊರಕಿದರೆ ಮಾತ್ರ ಮದುವೆ ಮಾಡಿಕೊಳ್ಳುಬೇಕೆಂದು ಮೆಕ್ಕಾ ಪೋಲೀಸ್ ನಿರ್ದೇಶಕ ಅಸಾಫ್ ಅಲ್-ಕ್ವಾರ್ಷಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗಲ್ಫ್ ಸಹಕಾರ ಮಂಡಳಿಯೊಂದಿಗೆ ಚರ್ಚಿಸಿರುವ ಸೌದಿ ಸರ್ಕಾರ, ಸೌದಿ ಹುಡುಗರು ಮದುವೆಗೂ ಮುನ್ನ, ಸರ್ಕಾರಕ್ಕೆ ಮದುವೆ ಕುರಿತು ಅರ್ಜಿ ಸಲ್ಲಿಸಬೇಕು, ಸರ್ಕಾರೀ ಸಮಿತಿಯಿಂದ ಮಂಜೂರಾತಿ ಅಥವಾ ನಿರಾಕರಣೆಯ ಅಧಿಕೃತ ಹೇಳಿಕೆ ಬರುವವರೆಗೂ ಕಾಯಬೇಕು. ಅಧಿಕೃತ ಹೇಳಿಕೆಯ ನಂತರವಷ್ಟೇ ಆ ಯುವಕ ಯುವತಿ ಮದುವೆಯ ಮುಂದಿನ ಹೆಜ್ಜೆ ಇಡಬೇಕು ಎಂದು ಕಟ್ಟುನಿಟ್ಟಿನ ನಿಯಮವನ್ನು ಹೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement