ನಾಳೆ 'ಬೆಂಗಳೂರು ಫ್ಯಾಷನ್ ಸಪ್ತಾಹ'
ಬೆಂಗಳೂರು: ಮಿಂಟ್ರ.ಕಾಂ, ಬೆಂಗಳೂರು ಫ್ಯಾಷನ್ ವೀಕ್ನ (ಬಿಎಫ್ಡಬ್ಲ್ಯೂ) 11ನೇ ಆವೃತ್ತಿಯನ್ನು, ಆಗಸ್ಟ್ 7ರಿಂದ 10ರವರೆಗೆ ಶೆರಾಟನ್ ಬೆಂಗಳೂರು ಹೋಟೆಲ್, ಬ್ರಿಗೇಡ್ ಗೇಟ್ವೇಯಲ್ಲಿ ಆಯೋಜಿಸಿದೆ.
ಬೆಂಗಳೂರು ಫ್ಯಾಷನ್ ವೀಕ್ನೊಂದಿಗೆ, ಭಾರತದ ಪ್ರಮುಖ ಆನ್ಲೈನ್ ಫ್ಯಾಷನ್ ವೆಬ್ಸೈಟ್ನ ಈ ಕಾರ್ಯವಿಧಾನ ಒಪ್ಪಂದವು, ಮಿಂಟ್ರಾದ ಬೃಹತ್ ಪ್ರಮಾಣದ ಗ್ರಾಹಕರಿಗೆ ಡಿಸೈನರ್ ಉಡುಗೆಗಳನ್ನು ಒದಗಿಸಲು ಹಾಗೂ ಇತ್ತೀಚಿನ ಫ್ಯಾಷನ್ ಪ್ರವೃತ್ತಿಗಳ ಉಡುಗೆಗಳನ್ನು ಪರಿಚಯಿಸುವ ಪ್ರೋತ್ಸಾಹಕ ಪ್ರಯತ್ನಗಳ ಭಾಗವಾಗಿದೆ.
ಫ್ಯಾಷನ್ ಲೋಕದಲ್ಲಿ ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಿರುವ ಈ 11ನೇ ಆವೃತ್ತಿಯು, ಬೆಂಗಳೂರಿಗೆ ಗ್ಲಾಮರ್ ಹಾಗೂ ಆಕರ್ಷಣೆಯನ್ನು ತರುತ್ತಿದೆ. ಬೆಂಗಳೂರು ಫ್ಯಾಷನ್ ವೀಕ್ನಲ್ಲಿ ಹೆಸರಾಂತ ಫ್ಯಾಷನ್ ವಿನ್ಯಾಸಗಾರರಾದ ಅಸಿಮಾ ಲೀನಾ, ಪ್ರಿಯ ಕಟರಿಯ ಪುರಿ, ಅರ್ಚನ ಕೊಚ್ಚರ್, ಅಸ್ಲಂ ಖಾನ್, ರಮೇಶ್ ಡೆಂಬ್ಲ, ದೆಬರುನ್ ಮುಖಜರ್ಿ, ಲಲಿತ್ ದಾಲ್ಮಿಯ ಸೇರಿದಂತೆ ಭಾರತದಾದ್ಯಂತ 36 ಖ್ಯಾತ ವಿನ್ಯಾಸಗಾರರು ಭಾಗವಹಿಸಲಿದ್ದಾರೆ. ಜೊತೆಗೆ, ಈ ಸಂದರ್ಭದಲ್ಲಿ ಮಿಂಟ್ರ.ಕಾಂ ತನ್ನ ಶರದೃತು ಚಳಿಗಾಲದ 2014 ಸಂಗ್ರಹವನ್ನು ಪರಿಚಯಿಸಲಿದೆ. ಈ ಸಂಗ್ರಹ ಶ್ರೇಣಿಯಲ್ಲಿ ರೋಡಸ್ಟರ್ ಹಾಗೂ ಡ್ರೆಸ್ಬೆರ್ರಿಗಳು ಪ್ರಮುಖ ಆಕರ್ಷಣೆಗಳಾಗಿವೆ.