ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗ್ರಾಮೀಣ ಶಿಕ್ಷಕರಿಗಾಗಿ 'ಜ್ಞಾನದೀಪ'

Lingaraj Badiger
Updated On : 7 Aug 2014, 4:03 am

ಮೈಸೂರು: ಗ್ರಾಮೀಣ ಭಾಗದ ಮಾಧ್ಯಮಿಕ ಶಾಲೆಗಳ ಗಣಿತ ಮತ್ತು ವಿಜ್ಞಾನ ವಿಷಯದ ಶಿಕ್ಷಕರಿಗಾಗಿ ಇನ್ಫೋಸಿಸ್ ಸೈನ್ಸ್ ಫೌಂಡೇಷನ್(ಐಎಸ್‌ಎಫ್) 'ಜ್ಞಾನದೀಪ' ಎಂಬ ತರಬೇತಿ ಕಾರ್ಯಾಕ್ರಮ ಆಯೋಜಿಸಿದೆ.

ಮೈಸೂರಿನಲ್ಲಿ ಆಗಸ್ಟ್ 2ರಿಂದ 12ರವರೆಗೆ ಈ ತರಬೇತಿ ಕಾರ್ಯಗಾರ ನಡೆಯುತ್ತಿದ್ದು, ಕಾರ್ಯಾಗಾರದಲ್ಲಿ ಕರ್ನಾಟಕದ ಗ್ರಾಮೀಣ ಭಾಗದ ಮಾಧ್ಯಮಿಕ ಶಾಲೆಗಳಿಂದ ಸುಮಾರು 680 ಶಿಕ್ಷಕರು ಭಾಗವಹಿಸಿದ್ದಾರೆ.

ಶಿಕ್ಷಕರು ಸಾಮಾನ್ಯವಾಗಿ ವಿದ್ಯಾಥರ್ಿಗಳಿಗೆ ವಿಷಯ ಮನವರಿಕೆ ಮಾಡಿಕೊಡಲು ಪಠ್ಯಪುಸ್ತಕಗಳನ್ನು ಅವಲಂಬಿಸುತ್ತಾರೆ. ಪಠ್ಯಪುಸ್ತಕಗಳನ್ನೂ  ಮೀರಿ ವಿಸ್ತೃತ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವುದು, ಮಕ್ಕಳಲ್ಲಿ ಕುತೂಹಲ ಮೂಡಿಸುವುದು, ವಿಶ್ಲೇಷಣಾತ್ಮಕ ಕಲಿಕೆಗೆ ಒತ್ತು ನೀಡುವುದು ಇದರ ಉದ್ದೇಶ. 10 ದಿನದ ಈ ಕಾಯರ್ಾಗಾರವನ್ನು ಬಹುತೇಕ ಕನ್ನಡ ಭಾಷೆಯಲ್ಲಿ ನಡೆಸಿಕೊಡಲಾಗುತ್ತದೆ. ಸೃಜನಾತ್ಮಕ ಸಂವಹನ, ಉನ್ನತ ಮಾಧ್ಯಮಿಕ ಶಾಲೆಯ ಗಣಿತ, ವಿಜ್ಞಾನ ಪಠ್ಯಕ್ರಮಗಳ ವಿಷಯ ವ್ಯಾಪ್ತಿ ಒಳಗೊಂಡಿದೆ.

ಕಾಯರ್ಾಗಾರದಲ್ಲಿ ಬೋಧನಾ ಕ್ರಮದಲ್ಲಿ ಕಂಪ್ಯೂಟರ್ಗಳ ಬಳಕೆ, ಮಾದರಿಗಳ ನಿಮರ್ಾಣ, ಕಥೆ ನಿರೂಪಣೆ, `ಸುದ್ದಿಗಳಲ್ಲಿ ವಿಜ್ಞಾನ ವಿಷಯವನ್ನು ಕುರಿತ ಕಾಯರ್ಾಗಾರ, ಮ್ಯಾಜಿಕ್ ಟ್ರಿಕ್ಸ್, ಚಾರಿತ್ರಿಕ ಮತ್ತು ಪೌರಾಣಿಕ ನಿದರ್ಶನಗಳ ಉಲ್ಲೇಖ ಹಾಗೂ ಚಲನಚಿತ್ರಗಳ ತುಣುಕುಗಳು ಸಏರಿವೆ. ಅಲ್ಲದೆ, ನಿಯೋಜಿತ ಸೈಬರ್ ಕೆಫೆಗಳಲ್ಲಿ ಶಿಕ್ಷಕರು ಇಂಟರ್ನೆಟ್ ನೋಡಲು ಅವಕಾಶವಿದೆ.

ಇನ್ಫೋಸಿಸ್ ಮತ್ತು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಆಹಾರ ಮತ್ತು ವಸತಿ ಸೌಲಭ್ಯವನ್ನು ಹಾಗೂ ಪ್ರಯಾಣ ಭತ್ಯೆ, ದೈನಿಕ ಭತ್ಯೆಯನ್ನು ಭಾಗವಹಿಸುವ ಶಿಕ್ಷಕರಿಗೆ ನೀಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement