ನಟಿ ಸುಮಲತಾ ಇ-ಮೇಲ್ ಅಕೌಂಟ್ ಹ್ಯಾಕ್
ಪ್ರಮುಖ ನಟಿಯರ ಫೇಸ್‌ಬುಕ್ ಹಾಗೂ ಟ್ವೀಟರ್‌ಗಳಿಗೆ ಲಗ್ಗೆ ಇಟ್ಟಿದ್ದ ಹ್ಯಾಕ್ ಪ್ರವೃತ್ತಿ...
ಬೆಂಗಳೂರು: ಪ್ರಮುಖ ನಟಿಯರ ಫೇಸ್‌ಬುಕ್ ಹಾಗೂ ಟ್ವೀಟರ್‌ಗಳಿಗೆ ಲಗ್ಗೆ ಇಟ್ಟಿದ್ದ ಹ್ಯಾಕ್ ಪ್ರವೃತ್ತಿ ಇದೀಗ ಇ-ಮೇಲ್‌ಗೂ ತಟ್ಟಿದೆ.
ವಸತಿ ಸಚಿವ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ಅವರ ಯಾಹೂ ಇ-ಮೇಲ್ ಅಕೌಂಟನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಅಕೌಂಟ್‌ನಲ್ಲಿದ್ದ ಸ್ನೇಹಿತರ ಐಡಿಗಳಿಗೆ ಸುಳ್ಳು ಸಂದೇಶ ರವಾನಿಸಿದ್ದಾರೆ.
ಸುಮಲತಾ ಅವರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಹೀಗಾಗಿ ಆದಷ್ಟು ಬೇಗ ಅಲ್ಲಿಂದ ಹೊರ ಬರಲು ಸಹಾಯ ಮಾಡಿ ಅಂತಾ ಸುಳ್ಳು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಕಿಡಿಗೇಡಿಗಳು ಯಾವು ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಹಣಕ್ಕಾಗಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಅನುಮಾನಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾ ಅವರು, ನನ್ನ ಯಾಹೂ ಇ-ಮೇಲ್ ಅಕೌಂಟನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಹೀಗಾಗಿ ನನ್ನ ಅಕೌಂಟ್ ಮೂಲಕ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ತೆಲುಗಿನ ನಟಿ ಅಂಜಲಿ ದ್ವಿವೇದಿ ಅವರ ಟ್ವೀಟರನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅವರ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಇದರಿಂದ ಎಚ್ಚೆತ್ತ ಅಂಜಲಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.