ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಗಳ ಪ್ರಿಯಕರನ ಕೊಂದ ತಂದೆ, ಡೆಡ್ಬಾಡಿ ಸಮೇತ್ ಠಾಣೆಗೆ ಬಂದ ಭೂಪ

ಮಗಳನ್ನ ಪ್ರೀತಿಸುತ್ತಿದ್ದ ಯುವಕನನ್ನು...

Lingaraj Badiger
Updated On : 7 Aug 2014, 4:17 am

ಬೆಂಗಳೂರು: ಮಗಳನ್ನ ಪ್ರೀತಿಸುತ್ತಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ತಂದೆ, ಡೆಡ್ಬಾಡಿ ಸಮೇತ್ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಗುರುವಾರ ನಡೆದಿದೆ.

ಕೆ.ಆರ್.ಪುರಂ ನಿವಾಸಿ ರಿಯಾಜ್ ಖಾನ್ ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕ ಸಿದ್ದಿಕ್(25)ನನ್ನು ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಕೊಲೆ ಮಾಡಿ, ಬಳಿಕ ಆತನ ಶವವನ್ನು ಮೂಟೆಕಟ್ಟಿ ಬೈಕ್ನಲ್ಲಿ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರಿಯಾಜ್ ಖಾನ್ ವಿಚಾರಣೆ ನಡೆಸುತ್ತಿದ್ದಾರೆ.

ಸಾದಿಕ್ ಏಳನೇ ತರಗತಿ ಓದುತ್ತಿದ್ದ ಆರೋಪಿ ರಿಯಾಜ್ ಮಗಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕಳೆದ ಜುಲೈ 30ರಂದು ಪುತ್ರಿ ನಾಪತ್ತೆಯಾಗಿದ್ದು, ಈ ಸಂಬಂಧ ರಿಯಾಜ್ ಪೊಲೀಸರಿಗೆ ದೂರು ಸಹ ನೀಡಿದ್ದ ಎನ್ನಲಾಗಿದೆ. ಆದರೆ ಇದುವರೆಗೂ ರಿಯಾಜ್ ಪುತ್ರಿ ಪತ್ತೆಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement