ಮಹಾನದಿ ಪ್ರವಾಹಕ್ಕೆ 34 ಬಲಿ
ಎಡಬಿಡದೆ ಸುರಿದ ಮಳೆಯಿಂದಾಗಿ ಓಡಿಶಾದ ಮಹಾನದಿಯಲ್ಲಿ ಉಂಟಾದ ಪ್ರವಾಹಕ್ಕೆ...
ಭುವನೇಶ್ವರ: ಎಡಬಿಡದೆ ಸುರಿದ ಮಳೆಯಿಂದಾಗಿ ಓಡಿಶಾದ ಮಹಾನದಿಯಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ 34 ಮಂದಿ ಸಾವನ್ನಪ್ಪಿದ್ದಾರೆ.
ಮಹಾನದಿ ಪಾತ್ರದ ಸುಮಾರು ಒಂದೂವರೆ ಸಾವಿರ ಗ್ರಾಮಗಳಿಗೆ ನೀರು ನುಗ್ಗಿದ್ದು, ಸುಮಾರು ಹತ್ತು ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಮಹಾಪತ್ರ ತಿಳಿಸಿದ್ದಾರೆ.
ಕೆಲ ದಿನಗಳಿಂದ ಸುರಿಯುತ್ತಿರುವ ಹೆಚ್ಚಿನ ಪ್ರಮಾಣದ ಮಳೆಯಿಂದಾಗಿ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದ ಹಿರಾಕುಂಡ್ ಜಲಾಶಯಕ್ಕೆ ಅಪಾಯವಾಗುತ್ತದೆಯೇ ಎಂಬುದರ ಅಂದಾಜಿಲ್ಲ ಎಂದು ಅವರು ಹೇಳಿದ್ದಾರೆ.