ಮುಂಬೈನಲ್ಲಿ ಅಗ್ನಿ ಅವಘಡ: ಓರ್ವ ವಿದೇಶಿಗ ಸಾವು
ಮುಂಬೈನ ವಾಂಟನ್ ಹೌಸ್ ಹೊಟೇಲ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಓರ್ವ...
ಮುಂಬೈ: ಮುಂಬೈನ ವಾಂಟನ್ ಹೌಸ್ ಹೊಟೇಲ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಓರ್ವ ವಿದೇಶಿಗ ಮೃತಪಟ್ಟಿದ್ದು, ಘಟನೆಯಲ್ಲಿ ಸುಮಾರು 28 ಮಂದಿಗೆ ಗಾಯಗಳಾಗಿವೆ.
ಹೊಟೇಲ್ನಲ್ಲಿ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೆಂಕಿಗೆ ಸಿಲುಕಿ ನೈಜೀರಿಯಾ ಮೂಲದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಇಬ್ಬರು ಜರ್ಮನ್ ದಂಪತಿಗಳು ಸೇರಿದಂತೆ 28 ಮಂದಿಗೆ ಸುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳನ್ನು ಪರೀಕ್ಷಿಸಿದ ವೈದ್ಯರು ಜರ್ಮನ್ ದಂಪತಿ ಸೇರಿ 14 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಹೊಟೇಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೊಗೆ ಆವರಿಸಿಕೊಂಡಿದ್ದರಿಂದ ಕಣ್ಣು ಕಾಣದೇ ಕೆಲವರು ಕೆಳಗೆ ಬಿದ್ದ ಕಾರಣ ಸಣ್ಣ ಪುಟ್ಟ ಗಾಯಗಳಾಗಿವೆ. ಅದರಲ್ಲಿ ಹೆಚ್ಚಾಗಿ ಆಕ್ಸೀಸ್ ಬ್ಯಾಂಕ್ ಹಾಗೂ ಹೊಟೇಲ್ಗೆ ಸೇರಿದ ಸಿಬ್ಬಂದಿಗಳಾಗಿದ್ದಾರೆ.
ಹೊಟೇಲ್ನಲ್ಲಿ ಅಳವಡಿಸಿರುವ ಎಸಿ ಡಕ್ನಲ್ಲಿ ಸಂಭವಿಸಿದ ಶಾರ್ಟ್ ಸಕ್ಯೂರ್ಟ್ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.
ಹೊಟೇಲ್ ವಾಂಟೆನ್ ಹೌಸ್ನಲ್ಲಿ ಬೆಳಗ್ಗೆ 4.45 ರಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸತತ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.